HomeKarnatakaಹುಬ್ಬಳ್ಳಿ ಗಲಭೆಯ ಸೊ ಕಾಲ್ಡ್ ಅಮಾಯಕರ ಮಸಲತ್ತು ಬಯಲು: ಈ ಉಗ್ರರನ್ನ ಅಮಾಯಕರು ಅಂದ ಕೈ...

ಹುಬ್ಬಳ್ಳಿ ಗಲಭೆಯ ಸೊ ಕಾಲ್ಡ್ ಅಮಾಯಕರ ಮಸಲತ್ತು ಬಯಲು: ಈ ಉಗ್ರರನ್ನ ಅಮಾಯಕರು ಅಂದ ಕೈ ನಾಯಕರ ಬಾಯಿಗೆ ಈಗ ಲಕ್ವ ಹೊಡೆದಿದೆಯೇ?

ಹುಬ್ಬಳ್ಳಿ: ಹನುಮ ಜಯಂತಿಯಂದು ಹುಬ್ಬಳ್ಳಿಯಲ್ಲಿ ಗಲಭೆ ಎಬ್ಬಿಸಿದ ಮುಸ್ಲಿಂ ಮತಾಂಧರ ಹಾಗು ಆ ಮತಾಂಧರನ್ನು ಮುನ್ನಡೆಸಿದ ಮೌಲ್ವಿ ಹಾಗು ಇತರೆ ನಾಯಕರ “ಅಮಾಯಕ” ಎಂಬ ಮುಖವಾಡ ಕಳಚಿ ಬಿದ್ದಿದೆ. ಗಲಭೆ ಸಂಬಂಧ ಹತ್ತಿರ ಹತ್ತಿರ 150 ಮಂದಿಯನ್ನು ಬಂಧಿಸಲಾಗಿದ್ದು, ಗಲಭೆಯ ಮಾಸ್ಟರ್ ಮೈಂಡ್ ಮೌಲ್ವಿ ವಸೀಮನನ್ನು ಮುಂಬೈಯಲ್ಲಿ ಬಂಧಿಸಿ ಎಳೆದುಕೊಂಡು ಬರಲಾಗಿತ್ತು. ಬಂಧನಕ್ಕೂ ಕೆಲ ಗಂಟೆ ಹಿಂದೆ ತಾನು ಅಮಾಯಕ, ಗಲಭೆ ತಪ್ಪಿಸಲೆಂದೇ ಜೀಪು ಏರಿದ್ದೆ ಎಂದು ಸೆಲ್ಫಿ ವಿಡಿಯೋ ಬಿಟ್ಟಿದ್ದ ಮೌಲ್ವಿಯ ಸಾಚಾತನ ಇದೀಗ ಬಯಲಾಗಿದೆ.

ಗಲಭೆಯ ರೂಪುರೇಷೆಗೆ ಅಡಿಗಲ್ಲನ್ನು ರಾಮನವಮಿ ದಿನವೇ ಹಾಕಲಾಗಿತ್ತು. ಅಂದು ರಾಮನವಮಿ ದಿನ ಕೆಲ ಹಿಂದೂ ಕಾರ್ಯಕರ್ತರು ಮಸೀದಿ ಮೇಲೆ ಲೇಸರ್ ಬೆಳಕನ್ನು ಹರಿಯಬಿಟ್ಟಿರುತ್ತಾರೆ. ಬಿಟ್ಟಿದ್ದು ಬೆಳಕು ಅಷ್ಟೇ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ತಾನು ಅಮಾಯಕ ಅಂದು ಘೋಷಿಸಿಕೊಂಡ ಮೌಲ್ವಿ ವಸೀಮ್ ಪಠಾಣ್ ಗಲಭೆಗೆ ಸಂಚು ರೂಪಿಸುತ್ತಾನೆ. ಇದರ ಮೊದಲ ಹಂತವಾಗಿ ಒಂದು ಪ್ರತ್ಯೇಕ ವಾಟ್ಸಾಪ್ ಗ್ರೂಪ್ ಅನ್ನು ರಚಿಸುತ್ತಾನೆ. ಇದು ಗಲಭೆಯ ಪ್ರಾಜೆಕ್ಟ್ ಗಾಗಿಯೇ ತೆರೆದ ವಾಟ್ಸಾಪ್ ಗ್ರೂಪ್. ಆ ಗುಂಪಿನಲ್ಲಿ ಹನುಮ ಜಯಂತಿಯಂದು ಸಭೆ ಸೇರೋಣ ಎಂದು ಕರೆ ಕೊಡುತ್ತಾನೆ. ಮತ್ತು ಆ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಕೂಡ ಸೂಚನೆ ಹರಿಯಬಿಟ್ಟಿದ್ದ.

ಯೋಜಿತ ದಿನ ತಲೆಕೆಟ್ಟ ಅಭಿಷೇಕ್ ಎಂಬ ಹುಡುಗ ತನ್ನ ವಾಟ್ಸಾಪ್ ನಲ್ಲಿ ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಹಾರಿಸಿದ ಚಿತ್ರವನ್ನು ಸ್ಟೇಟಸ್ ಆಗಿ ಹಾಕುತ್ತಾನೆ. ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಚಿತ್ರ ಹಾಕಿ ಅದೇನು ಸಾಧಿಸಿದನೋ. ಅದೇಗೆ ಹಿಂದೂ ಧರ್ಮದ ರಕ್ಷಣೆಯನ್ನು ಮಾಡಿದನೋ ದೇವರೇ ಬಲ್ಲ. ಆದರೆ ಈ ಮೊದಲೇ ಗಲಭೆಗೆ ಪ್ಲಾನ್ ಮಾಡಿ ವಾಟ್ಸಪ್ ಗ್ರೂಪ್ ಮಾಡಿ ಕಾದು ಕುಳಿತಿದ್ದ ಮೌಲ್ವಿ ಮತ್ತು ಅವನ ಹಿಂಬಾಲಕ ಮುಸ್ಲಿಂ ಸೊ ಕಾಲ್ಡ್ ಅಮಾಯಕರಿಗೆ ಮತ್ತೊಂದು ನೆವ ಸಿಕ್ಕಂತಾಗಿತ್ತು. ಅಂದು ಅಭಿಷೇಕ್ ಫೋಟೋ ಹಾಕಿಲ್ಲ ಎಂದರೂ ಅವರು ಗಲಭೆ ಎಬ್ಬಿಸುವುದು ಪಕ್ಕಾ ಆಗಿತ್ತು. ಆ ಫೋಟೋ ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ಆಗಮಿಸಿದ ಈ ಉಗ್ರ ಮನಸ್ಥಿತಿಯ ಮೌಲ್ವಿ ಇನ್ನು ಹತ್ತು ನಿಮಿಷದಲ್ಲಿ ಏನಾಗುತ್ತೆ ನೋಡಿ ಎಂದು ಪೊಲೀಸರಿಗೇ ವಾರ್ನ್ ಮಾಡುತ್ತಾನೆ. ನಮ್ಮ ಮತದ ಎಲ್ಲ ಮುಖಂಡರೂ ಬರುತ್ತಾರೆ ನೋಡಿ ಎಂದು ಪೊಲೀಸ್ ವ್ಯವಸ್ಥೆಗೆ ಸವಾಲು ಹಾಕಿದ್ದ. ಅದೇ ವೇಳೆ ನಿರ್ಧರಿತ ಸಭೆಗೆ ಆಹ್ವಾನಿಸಿದ್ದ ಎಲ್ಲರನ್ನೂ ಠಾಣೆ ಬಳಿ ಜಮಾಯಿಸುವಂತೆ ಸೂಚಿಸುತ್ತಾನೆ.

ಜನ ಸೇರಿದ ಬಳಿಕ ಪೊಲೀಸ್ ಜೀಪು ಏರಿ ನಿಂತ ಮೌಲ್ವಿ ವಸೀಮ್ ಅಲ್ಲಿ ಸೇರಿದ್ದ ಇಸ್ಲಾಂ ಮತಾಂಧ ಯುವಕರಿಗೆ ಅಲಿಯಾಸ್ ಸೊ ಕಾಲ್ಡ್ ಅಮಾಯಕರಿಗೆ ಪ್ರಚೋದನಾತ್ಮವಾಗಿ ನಿರ್ದೇಶನ ನೀಡುತ್ತಾನೆ. ಮುಂದೆ ಆಗಿದ್ದು ಎಲ್ಲರಿಗೂ ಗೊತ್ತಿದೆ. ಕಲ್ಲು ತೂರಾಟ, ಆಸ್ತಿ ಪಾಸ್ತಿ ನಾಶ, ಪೊಲೀಸ್ ವಾಹನ ಧ್ವಂಸ, ಹಲ್ಲೆ, ಪೊಲೀಸರ ಕೊಲೆ ಯತ್ನ ಇತ್ಯಾದಿ ಇತ್ಯಾದಿ. ಪೊಲೀಸರು ಮುಂದುವರೆದು ಲಾಠಿಚಾರ್ಜ್ ಮಾಡದೇ ಇದ್ದಲ್ಲಿ ಅಂದು ಹುಬ್ಬಳ್ಳಿ ಹೊತ್ತಿ ಉರಿದು ಹಲವು ಹಿಂದೂಗಳ ಜತೆಗೆ ಹಲವು ಪೊಲೀಸರ ಹೆಣಗಳು ಬೀದಿಯಲ್ಲಿ ಅನಾಥವಾಗಿ ಬಿದ್ದಿರುತ್ತಿದ್ದವು ಎಂದು ಸ್ವತಃ ಪ್ರತ್ಯಕ್ಷದರ್ಶಿಗಳೇ ತಿಳಿಸಿದ್ದಾರೆ. ಇಂತಹ ಉಗ್ರಗಾಮಿಗಳನ್ನು ಅಮಾಯಕರು ಎಂದು ಹಿಂದು ಮುಂದು ಯೋಚಿಸದೆ ಸರ್ಟಿಫಿಕೇಟ್ ನೀಡಿದ ಕಾಂಗ್ರೆಸ್ ನಾಯಕರು ಈಗ ಬಾಯಿಗೆ ಲಕ್ವ ಬಡಿದಂತೆ ಸುಮ್ಮನಾಗಿದ್ದಾರೆ.

ಮೌಲ್ವಿ ವಸೀಮ್ ಪಠಾಣ್ ಈತ ಮೊದಲಿಗೆ ಲಾರಿ ಡ್ರೈವರ್ ಆಗಿದ್ದು ನಂತರ ಮುಂಬೈನಲ್ಲಿ ರಝ ಎಂಬ ಕಟ್ಟರ್ ಮುಸ್ಲಿಂ ಸಂಘಟನೆಯೊಂದಿಗೆ ಕೆಲಸ ಮಾಡುತ್ತಾನೆ. ಮುಂಬೈನಲ್ಲಿ ಹಲವು ಕೋಮು ಗಲಭೆಗಳ ಹಿಂದೆ ರಝ ಸಂಘಟನೆಯ ಕೈವಾಡ ಇದೆ. ಮುಂಬೈ ಆಜಾದ್ ಮೈದಾನ್ ಪ್ರದೇಶದಲ್ಲಿ 2012ರಲ್ಲಿ 40,000ಕ್ಕೂ ಅಧಿಕ ಮುಸ್ಲಿಮರಿಂದ ನಡೆದ ಹಿಂಸಾಚಾರ ಕೂಡ ಅದರಲ್ಲಿ ಒಂದು. ಅದೇ ಗಲಭೆಯಲ್ಲಿ ಅಮರ್ ಜವಾನ್ ಸ್ಮಾರಕವನ್ನು ಕಾಲಿನಿಂದ ಒದ್ದು ಹಾಳುಗೆಡವಿದ ಘಟನೆ ನಡೆದಿದ್ದು. ವಸೀಮ್ ಪಠಾಣ್ ಮೌಲ್ವಿ ಅಲ್ಲದಿದ್ದರೂ ಮೌಲ್ವಿ ವೇಷ ಧರಿಸಿ ಹುಬ್ಬಳಿಯನ್ನು ತನ್ನ ಕಾರ್ಯ ಕ್ಷೇತ್ರವಾಗಿ ಮಾಡಿಕೊಂಡಿರುವ ಈತನ ಬಗ್ಗೆ ಮತ್ತಷ್ಟು ಮಾಹಿತಿ ಹೊರಬರಬೇಕಿದೆ.

ತನಗೆ ಬೇಕಾದಾಗ ಅಮಾಯಕರಂತೆ ಪೋಸು ಕೊಡುತ್ತಾ ಅವಕಾಶ ಸಿಕ್ಕಾಗಲೆಲ್ಲ ಭಯೋತ್ಪಾದಕರಂತೆ ವರ್ತಿಸುವ ಇಂತಹ ಮತಾಂಧ ಕ್ರಿಮಿಗಳಿಗೆ ಉತ್ತರಪ್ರದೇಶ ಮಧ್ಯಪ್ರದೇಶಗಳಲ್ಲಿ ಅನುಸರಿಸುವ ಕಠಿಣ ನಿಯಮಗಳೇ ಸೂಕ್ತ ಅನ್ನುವುದು ವಿಜಯ ಕನ್ನಡದ ಅಭಿಮತ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments