Karnataka

ಕೇರಳದಿಂದ ಗೋವಾ ಹೋಗುವವರಿಗೆ 5 ದಿನಗಳ ಕಡ್ಡಾಯ ಕ್ವಾರಂಟೈನ್

ಪಣಜಿ: ಕೇರಳದಿಂದ ಗೋವಾ ಪ್ರವೇಶಿಸುವವರಿಗೆ 5 ದಿನಗಳ ಕಡ್ಡಾಯ ಕ್ವಾರಂಟೈನ್ ಒಳಪಡಲು ಗೋವಾ ಸರ್ಕಾರ ಆದೇಶ ಹೊರಡಿಸಿದೆ. ಕೇರಳದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಕೇರಳದಿಂದ ಬರುವವರಿಗೆ ಕಟ್ಟುನಿಟ್ಟಿನ ತಪಾಸಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಜತೆಗೆ ಕೋವಿಡ್ ಎರಡು ಡೋಸ್ ಲಸಿಕೆ ಪಡೆದುಕೊಂಡಿರಬೇಕು ಮತ್ತು ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಎಂದು ಸರ್ಕಾರ ಹೇಳಿದೆ. ಈ ನಿಯಮ ಉಳಿದ ರಾಜ್ಯಗಳ ಪ್ರಯಾಣಿಕರಿಗೂ ಅನ್ವಯವಾಗಲಿದೆ. ಕರ್ನಾಟಕದಿಂದ ಗೋವಾ ಹೋಗುವುದಾದರೂ ನೆಗೆಟಿವ್ ರಿಪೋರ್ಟ್ ಹಾಗು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ಆದರೆ ಕೇರಳೀಯರಿಗೆ ಇವೆರಡರ ಜತೆಗೆ 5 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. 5 ದಿನಗಳ ಕ್ವಾರಂಟೈನ್ ನಂತರ ಮತ್ತೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು.

ಗೋವಾದಲ್ಲಿ ಪ್ರಸ್ತುತ ಇರುವ ಕರ್ಫ್ಯುವನ್ನು ಮತ್ತೆ ಒಂದು ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ. ಈ ತಿಂಗಳ ಸೆಪ್ಟೆಂಬರ್ 20 ತಾರೀಖಿನವರೆಗೆ ರಾಜ್ಯದಲ್ಲಿ ಕರ್ಫ್ಯು ಇರಲಿದೆ. ಗೋವಾ ಪ್ರವಾಸದ ಉದ್ಧೇಶವಿದ್ದವರು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.

Exit mobile version