
ಶಿವಮೊಗ್ಗ: ಭಾನುವಾರ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹರ್ಷನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಮೆಗ್ಗಾನ್ ಜಿಲ್ಲಾಸ್ಪತ್ರೆಯಿಂದ ಮೆರವಣಿಗೆ ಮೂಲಕ ಮೃತದೇಹವನ್ನು ಮೃತನ ಮನೆಗೆ ಸಾಗಿಸಲಾಗುತ್ತಿದೆ. ಅಲ್ಲಲ್ಲಿ ಮೆರವಣಿಯಿಗೆ ಮೇಲೆ ಕಲ್ಲು ತೂರಾಟ ನಡೆದ ಘಟನೆ ಜರಗಿದ್ದು ಪರಿಸ್ಥಿತಿ ಕೈ ಮೀರಿ ಹೋಗಿದೆ.
ಸೀಗೆಹಟ್ಟಿ, ಅಜಾದ್ ನಗರ, ಇಮಾಮ್ ಬಾದಾ ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆಯುತ್ತಿದ್ದು, ಅದರಲ್ಲೂ ಮುಸ್ಲಿಮರೇ ಹೆಚ್ಚಿರುವ ಇಮಾಮ್ ಬಾಡಾ ಪ್ರದೇಶದಲ್ಲಿ ಮುಸ್ಲಿಮರ ಗುಂಪು ಹಸಿರು ಧ್ವಜ ಹಿಡಿದು ಘೋಷಣೆ ಕೂಗುತ್ತಾ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಮನೆಗಳ ತಾರಸಿಗಳ ಮೇಲೆ ನಿಂತಿರುವ ಮುಸ್ಲಿಂ ಪುಂಡರ ಗುಂಪು ಶೋಕತಪ್ತ ಹಿಂದೂ ಕಾರ್ಯಕರ್ತರನ್ನು ಮತ್ತಷ್ಟು ಉದ್ರೇಕಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವರ ಕೈಯಲ್ಲಿ ಮಾರಕಾಸ್ತ್ರಗಳು ಕೂಡ ಪತ್ತೆಯಾಗಿವೆ. ಸ್ಥಳೀಯ ಮಸೀದಿಯಲ್ಲಿ ಮುಸ್ಲಿಮರು ಗುಂಪುಗೂಡಿ ತಲವಾರು ದೊಣ್ಣೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಗುಂಪನ್ನು ತಹಬದಿಗೆ ತರುವಲ್ಲಿ ಪೊಲೀಸರು ಶ್ರಮಿಸುತ್ತಿದ್ದಾರೆ.