HomeKarnatakaಆಜಾನ್ ಮೈಕ್ ಸಂಘರ್ಷ: ಮೈಕ್ ಬಳಕೆಗೆ ಅನುಮತಿ ಪಡೆಯಲು 15 ದಿನದ ಡೆಡ್ ಲೈನ್ ಘೋಷಿಸಿದ...

ಆಜಾನ್ ಮೈಕ್ ಸಂಘರ್ಷ: ಮೈಕ್ ಬಳಕೆಗೆ ಅನುಮತಿ ಪಡೆಯಲು 15 ದಿನದ ಡೆಡ್ ಲೈನ್ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಎದ್ದಿರುವ ಅಜಾನ್ ಮೈಕ್ ಬಳಕೆ ಸಂಘರ್ಷಕ್ಕೆ ತೆರೆ ಎಳೆಯಲು ಕೊನೆಗೂ ರಾಜ್ಯ ಸರಕಾರ ಮುಂದಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಸಿರುವವರು ಅರ್ಜಿ ಹಾಕಿ ಅನುಮತಿ ಪಡೆಯಬೇಕು ಎಂದು ಹೇಳಿದೆ. ಅದಕ್ಕಾಗಿ ಅವರಿಗೆ 15 ದಿನ ಅಥವಾ 1 ತಿಂಗಳು ಕಾಲಾವಕಾಶ ನೀಡಲಾಗುವುದು. ಒಂದು ವೇಳೆ ಅನುಮತಿ ಪಡೆಯದೇ ಇದ್ದರೆ ಅಂಥ ಧ್ವನಿವರ್ಧಕಗಳನ್ನು ತೆರವು ಮಾಡಲಾಗುವುದು ಸರಕಾರ ಹೇಳಿದೆ.

ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಕೂಡ ಮಸೀದಿಗಳಲ್ಲಿ ಮೈಕ್ ತೆರವುಗೊಳಿಸದ ಹಾಗು ನಿಗದಿತ ಡೆಸಿಬಲ್ ಗಿಂತ ಹೆಚ್ಚು ಸೌಂಡ್ ಇಟ್ಟು ಆಜಾನ್ ಕೂಗುತ್ತಿದ್ದ ಹಿನ್ನಲೆಯಲ್ಲಿ ಹಿಂದೂ ಸಂಘಟನೆಗಳು ಅದರಲ್ಲೂ ಪ್ರಮುಖವಾಗಿ ಪ್ರಮೋದ್ ಮುತಾಲಿಕ್ ಅವರ ನೇತೃತ್ವದ ಶ್ರೀ ರಾಮ ಸೇನೆ ತೀವ್ರ ಹೋರಾಟ ಸಂಘಟಿಸಿತ್ತು. ಇಂದು ಬೆಳಗ್ಗೆ ಒಂದು ಹೆಜ್ಜೆ ಮುಂದೆ ಹೋದ ಹಿಂದೂಗಳು ಅಜಾನ್ ಕೂಗುವ ಸಮಯದಲ್ಲಿ ಪಕ್ಕದ ದೇಗುಲಗಳಲ್ಲಿಸುಪ್ರಭಾತ ಹಾಗು ಭಜನೆ ಮೊಳಗಿಸುವ ಮೂಲಕ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಸಂಬಂಧಿಸಿದಂತೆ ಶೀಘ್ರ ಮಾರ್ಗಸೂಚಿ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಜಾನ್-ಭಜನೆ ಸಂಘರ್ಷದ ಬಗ್ಗೆ ತುರ್ತು ಸಭೆ ನಡೆಸಿದರು.‌ ಸಭೆಯಲ್ಲಿ ಡಿಜಿ ಐಜಿಪಿ ಪ್ರವೀಣ್ ಸೂದ್, ಬೆಂಗಳೂರು ಪೋಲಿಸ್ ಕಮಿಷನರ್ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದೆ ಸುಪ್ರೀಂ ಕೋರ್ಟ್ ಸೂಚಿಸಿದ್ದ ಡೆಸಿಬಲ್ ನಲ್ಲಿ ಹಾಗು ಸಮಯದಲ್ಲಿ ಮಾತ್ರ ಮೈಕ್ ಬಳಸಲು ಅಧಿಸೂಚನೆ ಹೊರಡಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಬೇರೆ ಡೆಸಿಬಲ್, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಬೇರೆ ಡೆಸಿಬಲ್ ನಲ್ಲಿ ಮೈಕ್ ಬಳಸುವ ಕುರಿತು ಮಾರ್ಗಸೂಚಿ ಇನ್ನು ಕೆಲ ದಿನಗಳಲ್ಲಿ ಹೊರಡಿಸಲಾಗುವುದು ಎಂದು ಸರಕಾರ ತಿಳಿಸಿದೆ. ಈ ಅಧಿಸೂಚನೆ ಹಿಂದೂ ಹಾಗು ಮುಸ್ಲಿಂ ಧಾರ್ಮಿಕ ಕೇಂದ್ರಗಳಲ್ಲಿನ ಧ್ವನಿವರ್ಧಕಗಳಿಗೆ ಮಾತ್ರ ಅಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳಿಗೂ ಅನ್ವಯಿಸಲಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments