HomeLifestyleಅತಿಯಾದ ಟಿವಿ ನೋಡುವ ಹವ್ಯಾಸ ನಿಮಗಿದೆಯೇ? ಹಾಗಾದರೆ ಈ ಲೇಖನ ನಿಮಗೆ

ಅತಿಯಾದ ಟಿವಿ ನೋಡುವ ಹವ್ಯಾಸ ನಿಮಗಿದೆಯೇ? ಹಾಗಾದರೆ ಈ ಲೇಖನ ನಿಮಗೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಟಿವಿ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆಯೇ ಇದರಿಂದ ಆಗುವ ದುಷ್ಪರಿಣಾಮಗಳೂ ಕಡಿಮೆಯೇನಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುತ್ತೀರಾ? ಸಂಶೋಧನೆಗಳ ಪ್ರಕಾರ ಹೆಚ್ಚು ಸಮಯ ಟಿವಿ ನೋಡುವುದರಿಂದ ಸಾಮಾನ್ಯ ಸ್ಥಿತಿಗಿಂತ ದುಪ್ಪಟ್ಟು ರಕ್ತ ಹೆಪ್ಪುಗಟ್ಟಲಿದೆ ಎಂಬುದು ತಿಳಿದುಬಂದಿದೆ.

ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಎದ್ದ ಬಳಿಕ ಮನೆಯಲ್ಲಿರುವ ದೇವರ ಫೋಟೊಗಳಿಗೆ ನಮಸ್ಕರಿಸುತ್ತಿದ್ದರು ಮತ್ತು ಮನೆಯ ಹೊರಗಡೆ ಇರುವಂತಹ ತುಳಸಿ ಕಟ್ಟೆಗೆ ಕೂಡ ಸುತ್ತು ಹಾಕಿ, ನಮಸ್ಕರಿಸಿ ಬರುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಮೊಬೈಲ್ ನಲ್ಲಿ ವ್ಯಸ್ತರಾಗಿದ್ದು, ಹಾಸಿಗೆಯಿಂದ ಎದ್ದ ಕೂಡಲೇ ಅವರು ಮೊಬೈಲ್ ನೋಡುವುದನ್ನೇ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.

ಇಂಗ್ಲೆಂಡಿನಲ್ಲಿ ನಡೆಸಿದ ಈ ಅಧ್ಯಯನ ಪ್ರಕಾರ ಮಾನಸಿಕವಾಗಿ ಕ್ರೀಯಾಶೀಲವಾಗಿ ಕುಳಿತುಕೊಳ್ಳುವುದಕ್ಕಿಂತ ಟಿವಿ,ಮೊಬೈಲ್ ನೋಡುವ ಜನರಲ್ಲಿ ಖಿನ್ನತೆಯ ಅಪಾಯವು ಶೇಕಡಾ 43 ರಷ್ಟು ಹೆಚ್ಚಾಗಿದೆ ಎಂದು ಕಂಡುಬಂದಿದೆ. ನೀವು ಕುಳಿತು ಮಾನಸಿಕವಾಗಿ ಸಕ್ರಿಯರಾಗಿದ್ದರೆ ಅದು ನಿಮಗೆ ಕಡಿಮೆ ಹಾನಿಯನ್ನುಂಟುಮಾಡುತ್ತದೆ. ಒತ್ತಡ, ಹೃದಯ ಅಪಾಯ, ಸ್ಥೂಲಕಾಯತೆಯು ನಿಮ್ಮಲ್ಲಿ ಖಿನ್ನತೆಯನ್ನು ಉಂಟುಮಾಡಬಹುದು. ಆದ್ದರಿಂದ ದೈಹಿಕವಾಗಿ ಸಕ್ರಿಯವಾಗಿರುವುದು ಆರೋಗ್ಯಕ್ಕೆ ಒಳ್ಳೆಯದು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments