Movie

ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿದ ತೆಲುಗು ಸ್ಟಾರ್ ನಟ ನಾಗಾರ್ಜುನ! ಲಕ್ಷದ್ವೀಪಕ್ಕೆ ಪಯಣ

ಮಾಲ್ಡೀವ್ಸ್ ಚೀನಾ ತೆಕ್ಕೆಗೆ ಜಾರಿ ಭಾರತದ ವಿರುದ್ಧ ಬುಸುಗುಟ್ಟುತ್ತಿರುವ ಬೆನ್ನಲ್ಲೇ ಭಾರತೀಯ ಸ್ಟಾರ್ ಸೆಲೆಬ್ರಿಟಿಗಳು, ನಟ, ನಟಿಯರು, ಜನ ಸಾಮಾನ್ಯರು ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಗಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ದಕ್ಷಿಣ ಭಾರತೀಯ ನಟ ತೆಲುಗಿನ ನಾಗಾರ್ಜುನ ಜನವರಿ 17 ರಂದು ಮಾಲ್ಡೀವ್ಸ್‌ಗೆ ಹೋಗಬೇಕಿತ್ತು. ಈಗ ಅವರು ತಮ್ಮ ಮಾಲ್ಡೀವ್ಸ್ ಯೋಜನೆಯನ್ನು ರದ್ದು ಮಾಡಿದ್ದಾರೆ. ಇದೀಗ ತಾನು ಲಕ್ಷದ್ವೀಪಕ್ಕೆ ಹೋಗುವುದಾಗಿ ಹೇಳಿದ್ದಾರೆ. ನಾನು ಯಾವುದೇ ಭಯದಿಂದ ಈ ರೀತಿ ಮಾಡುತ್ತಿಲ್ಲ. ಕೆಲವು ಮಾಲ್ಡೀವ್ಸ್ ಸಚಿವರು ನಮ್ಮ ದೇಶದ ಪ್ರಧಾನಿ ಬಗ್ಗೆ ಮಾಡಿದ ಕಾಮೆಂಟ್ ಗಳು ಸರಿಯಲ್ಲ ಎಂದು ನಾಗಾರ್ಜುನ ಹೇಳಿದ್ದಾರೆ.

“ನಾನು ಬಿಗ್ ಬಾಸ್ (ತೆಲುಗು) ಮತ್ತು ಸಾಮಿ ರಂಗ ಸಿನೆಮಾಕ್ಕಾಗಿ 75 ದಿನಗಳ ಕಾಲ ವಿರಾಮ ಪಡೆಯದೇ ಕೆಲಸ ಮಾಡಿದ್ದೇನೆ. ಹಾಗಾಗಿ ವಿರಾಮಕ್ಕಾಗಿ ಮಾಲ್ಡೀವ್ಸ್ ತೆರಳಲು ನಿರ್ಧರಿಸಿದ್ದೆ. ಇದೀಗ ಮಾಲ್ಡೀವ್ಸ್ ಟಿಕೆಟ್ ರದ್ದು ಮಾಡಿ ಮುಂದಿನ ವಾರ ಲಕ್ಷದ್ವೀಪಕ್ಕೆ ಹೋಗುವ ಯೋಚನೆಯಲ್ಲಿದ್ದೇನೆ. ನಾನು ಭಯದಿಂದ ಅಥವಾ ಇನ್ನಾವುದೇ ಕಾರಣದಿಂದ ಇದನ್ನು ಮಾಡಿಲ್ಲ. ಮಾಲ್ಡೀವ್ಸ್ ವರ್ತನೆ ಸರಿಯಿಲ್ಲದ ಕಾರಣ ನಾನು ಟಿಕೆಟ್ ರದ್ದು ಮಾಡಿದೆ. ನರೇಂದ್ರ ಮೋದಿ ಅವರು ನಮ್ಮ ಪ್ರಧಾನಿ. ಅವರು ಭಾರತದ 1.5 ಬಿಲಿಯನ್ ಜನರನ್ನು ಮುನ್ನಡೆಸುತ್ತಿದ್ದಾರೆ. ಅವರು ಈ ದೇಶದ ಭಾರವನ್ನು ಹೊರುತ್ತಿದ್ದಾರೆ. ಪ್ರತಿ ಕ್ರಿಯೆಗೆ ಕೆಲವು ಪ್ರತಿಕ್ರಿಯೆ ಇರುತ್ತದೆ.” ಎಂದು ನಾಗಾರ್ಜುನ ಹೇಳಿದ್ದಾರೆ.

Exit mobile version