HomeMovieತುಟಿಗೆ ಕಿಸ್ ಮಾಡಿ ಸದ್ಯದಲ್ಲಿಯೇ ಮದುವೆಯಾಗುತ್ತಿದ್ದೇವೆ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟ ನರೇಶ್ ಪವಿತ್ರಾ ಲೋಕೇಶ್

ತುಟಿಗೆ ಕಿಸ್ ಮಾಡಿ ಸದ್ಯದಲ್ಲಿಯೇ ಮದುವೆಯಾಗುತ್ತಿದ್ದೇವೆ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟ ನರೇಶ್ ಪವಿತ್ರಾ ಲೋಕೇಶ್

ಬೆಂಗಳೂರು: 2022ರಲ್ಲಿ ಭಾರೀ ಸುದ್ದಿ ಮಾಡಿದ್ದ ಜೋಡಿ ಎಂದರೆ ತೆಲುಗು ನಟ ನರೇಶ್ ಹಾಗು ಕನ್ನಡದ ಬಹು ಭಾಷಾ ನಟಿ ಪವಿತ್ರ ಲೋಕೇಶ್. ಇದೀಗ ಈ ಇಬ್ಬರೂ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಪವಿತ್ರಾ ಲೋಕೇಶ್ ಹಾಗು ನರೇಶ್ 2023ರ ಹೊಸ ವರ್ಷದ ಶುಭಾಶಯ ಹೇಳುತ್ತಾ ತಮ್ಮ ಮದುವೆಯ ವಿಚಾರವನ್ನು ವಿಶಿಷ್ಟವಾಗಿ ರೊಮ್ಯಾಂಟಿಕ್ ಆಗಿ ಬಹಿರಂಗಪಡಿಸಿದ್ದಾರೆ.

ಟಾಲಿವುಡ್ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧ ಕೆಲ ತಿಂಗಳ ಹಿಂದೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು ಹಾಗು ಎರಡೂ ರಾಜ್ಯಗಳಲ್ಲಿ ಜನರ ಬಾಯಿಗೆ ಹಲವು ದಿನಗಳ ಮಟ್ಟಿಗೆ ಮಾತಿನ ಸರಕಾಗಿತ್ತು. ಟಿವಿ ಮಾಧ್ಯಮಗಳಂತೂ ಅವರು ಹೋದಲೆಲ್ಲಾ ಹಿಂಬಾಲಿಸಿ ನ್ಯೂಸ್ ಮಾಡುತ್ತಿದ್ದರು. ನರೇಶ್ ಅವರ ಪತ್ನಿ ರಮ್ಯಾ ಇಬ್ಬರ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮೈಸೂರಿನ ಹೊಟೇಲ್ ರೂಂನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಉಳಿದುಕೊಂಡಿದ್ದ ವೇಳೆ ರಮ್ಯಾ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

2022 ಮುಕ್ತಾಯದ ವೇಳೆ ಈ ಇಬ್ಬರೂ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯೊತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು ಅದರಲ್ಲಿ ನರೇಶ್ ಮತ್ತು ಪವಿತ್ರಾ ಕ್ಯಾಂಡಲ್ ಲೈಟ್ ಉರಿಸಿ ಕೇಕ್ ಕತ್ತರಿಸಿ ಇಬ್ಬರೂ ಒಬ್ಬರಿಗೊಬ್ಬರು ತಿನ್ನಿಸಿ ನರೇಶ್ ಪವಿತ್ರಾ ಅವರ ತುಟಿಗೆ ರೊಮ್ಯಾಂಟಿಕ್ ಆಗಿ ಮುತ್ತಿಡುವ ದೃಶ್ಯ ಬಿಡುಗಡೆ ಮಾಡಿದ್ದಾರೆ. 2023ರ ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಾ ನಾನು ಮತ್ತು ಪವಿತ್ರಾ ಲೋಕೇಶ್ ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಹಾಗು ಇಬ್ಬರ ಹೆಸರನ್ನು ಜತೆಗೆ ಸೇರಿಸಿ ಪವಿತ್ರ ನರೇಶ್ ಎಂದು ಹ್ಯಾಷ್ ಟ್ಯಾಗ್ ಹಾಕಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments