HomeMovieಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಎಲ್ಲೆಡೆ ಟೀಕೆ: ಕ್ಷಮೆ ಕೇಳಿ ಜಾಹೀರಾತು ಕೈಬಿಟ್ಟ ನಟ...

ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಎಲ್ಲೆಡೆ ಟೀಕೆ: ಕ್ಷಮೆ ಕೇಳಿ ಜಾಹೀರಾತು ಕೈಬಿಟ್ಟ ನಟ ಅಕ್ಷಯ್ ಕುಮಾರ್

ಮುಂಬೈ: ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡು ಜನರಿಂದ ಭಾರೀ ಟೀಕೆ ಎದುರಿಸಿದ ಬಳಿಕ ನಟ ಅಕ್ಷಯ್ ಕುಮಾರ್ ಅವರು ಗುರುವಾರ ಕ್ಷಮೆಯಾಚಿಸಿ ಜಾಹೀರಾತನ್ನು ಕೈಬಿಟ್ಟಿದ್ದಾರೆ. ಇನ್ನು ಮುಂದೆ ವಿಮಲ್ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್ ಯಾಚಿಸಿದ್ದಾರೆ.

ಹಿಂದೊಮ್ಮೆ ಅಕ್ಷಯ್​ ಕುಮಾರ್​ ಅವರು ‘ಸ್ವಸ್ಥ ಭಾರತ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ ಗುಟ್ಕಾ, ಪಾನ್ ಮಸಾಲಾ ಕುರಿತು ದೊಡ್ಡದಾದ ಮಾತುಗಳನ್ನು ಆಡಿದ್ದರು. ನನಗೆ ದೊಡ್ಡ ದೊಡ್ಡ ಗುಟ್ಕಾ ಕಂಪನಿಗಳಿಂದ ಆಫರ್​ ಬರುತ್ತದೆ. ಅದರ ಜಾಹೀರಾತಿನಲ್ಲಿ ನಟಿಸಿದರೆ ನನಗೆ ಭಾರಿ ಪ್ರಮಾಣದ ಸಂಭಾವನೆ ಕೊಡುತ್ತಾರೆ . ಆದರೆ ನಾನು ಅಂಥ ತಪ್ಪು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು.

ಆದರೆ ಇದೀಗ ಗುಟ್ಕಾ ಜಾಹೀರಾತಿನಲ್ಲಿಯೇ ಅಕ್ಷಯ್ ನಟಿಸಿರುವುದಕ್ಕೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅಕ್ಷಯ್ ಅವರು ಗುಟ್ಕಾ ವಿರುದ್ಧ ಈ ಹಿಂದೆ ಹೇಳಿದ್ದ ಹೇಳಿಕೆಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜನರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಷಯ್ ಅವರು, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments