Movie

ಹಸೆಮಣೆ ಏರಿದ ಲೇಡಿ ಸೂಪರ್ ಸ್ಟಾರ್ ನಯನತಾರಾ, ವಿಘ್ನೇಶ್: ರಜನಿಕಾಂತ್, ಕಾರ್ತಿ, ಶಾರುಖ್ ಸೇರಿ ಹಲವು ಗಣ್ಯರು ಭಾಗಿ

ಮಹಾಬಲಿಪುರಂ: ಲೇಡಿ ಸೂಪರ್ ಸ್ಟಾರ್ ಖ್ಯಾತಿಯ, ಅಸಂಖ್ಯಾತ ಯುವ ಅಭಿಮಾನಿಗಳನ್ನು ಹೊಂದಿರುವ ನಯನತಾರಾ ಇಂದು ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಜತೆ ತಮ್ಮ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಮದುವೆಯು ಮಹಾಬಲಿಪುರಂನ ಜನಪ್ರಿಯ ರೆಸಾರ್ಟ್‌ನಲ್ಲಿ ನಡೆದಿದ್ದು ಭಾರತೀಯ ಚಲನಚಿತ್ರೋದ್ಯಮದ ಹಲವು ಗಣ್ಯರು ಭಾಗಿಯಾಗಿದ್ದರು.

ವರದಿಗಳ ಪ್ರಕಾರ, ಮದುವೆಯ ಭದ್ರತೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಅತಿಥಿಗಳು ವಿವಾಹದ ಮೊದಲು ವಿಶೇಷ ಕೋಡ್ ಅನ್ನು ಪಡೆಯುತ್ತಾರೆ ಮತ್ತು ಕೋಡ್ ತೋರಿಸಿದ ನಂತರವೇ ಮದುವೆ ಸಮಾರಂಭಕ್ಕೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ನಯನತಾರ ವಿಘ್ನೇಶ್ ಶಿವನ್ ಜೋಡಿ ಕೋವಿಡ್ ಕಾರಣಗಳಿಂದ ಈ ಹಿಂದೆ ತಮ್ಮ ಮದುವೆಯನ್ನು ಮುಂದೂಡಿತ್ತು.

ರಜನಿಕಾಂತ್, ಕಾರ್ತಿ, ಶಾರುಖ್ ಖಾನ್, ಬೋನಿ ಕಪೂರ್ ಸೇರಿ ಚಿತ್ರರಂಗದ ಹಲವಾರು ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದಾರೆ.

Exit mobile version