Movie

ಶ್ರೀಮುರುಳಿ ನಟನೆಯ ಮದಗಜ ತಂಡದಿಂದ ಮತ್ತೊಂದು ಸಿನೆಮಾ ಸುಳಿವು

ಬೆಂಗಳೂರು: ಶ್ರೀಮುರುಳಿ ನಟನೆಯ ಮಾದಗಜ ಸಿನೆಮಾ ೫೦ ದಿನಗಳನ್ನು ಯಶಸ್ವೀಯಾಗಿ ಪೂರೈಸಿದ ಸಂತಸದಲ್ಲಿರುವ ಚಿತ್ರತಂಡ ಮುರುಳಿ ಅವರನ್ನೇ ಹಾಕಿಕೊಂಡು ಮತ್ತೊಂದು ಸಿನೆಮಾ ಸೆಟ್ಟೇರಿಸುವ ಸುಳಿವು ನೀಡಿದೆ.

ಮದಗಜ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದರೆ, ಉಮಾಪತಿ ಅವರು ಬಂಡವಾಳ ಹೂಡಿದ್ದರು. ಈಗ ಮುರುಳಿ, ಮಹೇಶ್ ಹಾಗು ಉಮಾಪತಿ ಕಾಂಬಿನೇಷನ್ ಅಲ್ಲಿ ಮತ್ತೊಂದು ಸಿನೆಮಾ ಸೆಟ್ಟೇರುವ ಬಗ್ಗೆ ನಿರ್ದೇಶಕ ಮಹೇಶ್ ಕುಮಾರ್ ಹೇಳಿಕೊಂಡಿದ್ದಾರೆ. ಆದರೆ ಯಾವ ಜಾನರ್ ಸಿನೆಮಾ ಎಂದು ಗುಟ್ಟು ಬಿಟ್ಟು ಕೊಟ್ಟಿಲ್ಲ.

ಮದಗಜ ಸಿನೆಮಾಗೆ ಚಿತ್ರಮಂದಿರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಂತರ ಓಟಿಟಿ ಪ್ಲಾಟ್ಫಾರ್ಮ್ ಆದ ಅಮೆಜಾನ್ ಪ್ರೈಮ್ ಅಲ್ಲೂ ಬಿಡುಗಡೆಗೊಂಡಿತ್ತು.

Exit mobile version