HomeMovieಲವ್ ಜಿಹಾದ್ ಪ್ರಮೋಷನ್ ಮಾಡುತ್ತಿರುವ ನಯನತಾರ ಅಭಿನಯದ ‘ಅನ್ನಪೂರ್ಣಿ’ ಸಿನೆಮಾ: ನಟಿ, ಚಿತ್ರ ತಂಡದ ವಿರುದ್ಧ...

ಲವ್ ಜಿಹಾದ್ ಪ್ರಮೋಷನ್ ಮಾಡುತ್ತಿರುವ ನಯನತಾರ ಅಭಿನಯದ ‘ಅನ್ನಪೂರ್ಣಿ’ ಸಿನೆಮಾ: ನಟಿ, ಚಿತ್ರ ತಂಡದ ವಿರುದ್ಧ ದೂರು ದಾಖಲು

ಮುಂಬೈ: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ದಕ್ಷಿಣ ಭಾರತದ ಖ್ಯಾತ ಸ್ಟಾರ್ ನಟಿ ನಯನತಾರ ಅಭಿನಯದ ಅನ್ನಪೂರ್ಣಿ ಸಿನಿಮಾಗೆ ಇದೀಗ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಲವ್ ಜಿಹಾದ್ ಅನ್ನು ಉತೇಜಿಸುವ ದೃಶ್ಯಗಳನ್ನು ಚಿತ್ರ ತಂಡದ ಅಜೆಂಡಾ ರೀತಿಯಲ್ಲಿ ತೋರಿಸಲಾಗಿದೆ. ಜತೆಗೆ ಭಗವಾನ್ ಶ್ರೀ ರಾಮನನ್ನು ಅವಮಾನಿಸುವ ರೀತಿಯ ಸಂಭಾಷಣೆ ಕೂಡ ಒಳಗೊಂಡಿದೆ. ಚಿತ್ರದಲ್ಲಿನ ಕೆಲವು ದೃಶ್ಯಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ಎರಡು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ನಟಿ ನಯನತಾರಾ ಮತ್ತು ಚಿತ್ರಕ್ಕೆ ಸಂಬಂಧಿಸಿದ ಇತರರ ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ.

ಹಿಂದೂ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡಿದ ಕಾರಣ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನೆಟ್ ಫ್ಲಿಕ್ಸ್ ಸಿನೆಮಾ ಪ್ರಸಾರವನ್ನು ತಡೆ ಹಿಡಿದಿದೆ. ಅಲ್ಲದೆ ಸಿನೆಮಾಗೆ 1.7 ಗಿಂತಲೂ ಕಡಿಮೆ ರೇಟಿಂಗ್ ಬಂದಿದೆ.

ಹಿಂದೂ ಐಟಿ ಸೆಲ್ ಸಂಸ್ಥಾಪಕ ರಮೇಶ್ ಸೋಲಂಕಿ ಅವರು ದಕ್ಷಿಣ ಮುಂಬೈನ ಲೋಕಮಾನ್ಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ಬಜರಂಗದಳದ ಕಾರ್ಯಕರ್ತರು ಎರಡು ದಿನಗಳ ಹಿಂದೆ ಪಶ್ಚಿಮ ಉಪನಗರದಲ್ಲಿರುವ ಓಶಿವಾರಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ರಮೇಶ್ ಸೋಲಂಕಿ ಅವರ ದೂರಿನ ಪ್ರಕಾರ, ‘ಅನ್ನಪೂರ್ಣಿ’ ಚಿತ್ರವು ಭಗವಾನ್ ರಾಮನನ್ನು ಅವಮಾನಿಸುತ್ತದೆ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ದೂರಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಸಿನಿಮಾದ ಕೆಲವು ದೃಶ್ಯಗಳನ್ನೂ ಸೋಲಂಕಿ ಉಲ್ಲೇಖಿಸಿದ್ದಾರೆ. ದೂರಿನಲ್ಲಿ, ಚಿತ್ರದಲ್ಲಿ ದೇವಸ್ಥಾನವೊಂದರ ಅರ್ಚಕರ ಮಗಳಾಗಿರುವ ನಯನತಾರಾ ಅವರು ಬಿರಿಯಾನಿ ಮಾಡುವ ಮುನ್ನ ಇಸ್ಲಾಮಿನ ಹಿಜಾಬ್ ಅನ್ನು ಧರಿಸಿ ನಮಾಜ್ ಮಾಡುವುದನ್ನು ತೋರಿಸುತ್ತದೆ.

ಸಿನೆಮಾದ ಇನ್ನೊಂದು ದೃಶ್ಯದಲ್ಲಿ, ನಯನತಾರಾ ಪಾತ್ರದ ಸ್ನೇಹಿತ ಫರ್ಹಾನ್, ಮಾಂಸವನ್ನು ಕತ್ತರಿಸಲು ಆಕೆಯ ಬ್ರೈನ್ ವಾಶ್ ಮಾಡುತ್ತಾನೆ ಮತ್ತು ಭಗವಾನ್ ಶ್ರೀ ರಾಮ ಮತ್ತು ಸೀತೆ ಕೂಡ ಮಾಂಸ ಸೇವಿಸಿದ್ದಾರೆ ಎಂದು ಹೇಳುತ್ತಾನೆ. ಚಿತ್ರದಲ್ಲಿ ನಯನತಾರಾ ಪಾತ್ರ ದೇವಸ್ಥಾನಕ್ಕೆ ಹೋಗದೆ ಫರ್ಹಾನ್‌ ಗೆ ಸಂಬಂಧಿಸಿದ ‘ಇಫ್ತಾರಿ’ಗೆ ಹೋಗುವ ದೃಶ್ಯವೂ ಇದೆ. ಇವೆಲ್ಲವೂ ಉದ್ದೇಶಿತವಾಗಿ ಲವ್ ಜಿಹಾದ್ ಅಜೆಂಡಾವನ್ನು ಜನರ ಮೇಲೆ ಹೇರುವ ಯತ್ನ. ಹಾಗು ಹಿಂದೂ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುವ ಉದ್ಧೇಶಿತ ಕೃತ್ಯ ಎಂದು ಉಲ್ಲೇಖಿಸಲಾಗಿದೆ.

ಸಿನೆಮಾದ ನಾಯಕಿ ನಟಿ ನಯನತಾರಾ, ಸಿನೆಮಾ ನಿರ್ದೇಶಕ ನೀಲೇಶ್ ಕೃಷ್ಣ ಹಾಗು ಚಿತ್ರ ತಂಡದ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಮತ್ತು ಲವ್ ಜಿಹಾದ್ ಪ್ರಚಾರಕ್ಕಾಗಿ ಎಫ್‌ಐಆರ್ ದಾಖಲಿಸಬೇಕು ಎಂದು ಸೋಲಂಕಿ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd

RELATED ARTICLES

ಪ್ರಮುಖ ಸುದ್ದಿಗಳು

Recent Comments