Movie

ರಾಧಿಕಾ ನಾರಾಯಣ್ ಹಾಟ್ ಲುಕ್: ಫಿದಾ ಆದ ಅಭಿಮಾನಿಗಳು

ಬೆಂಗಳೂರು: ಕನ್ನಡದ ಹೆಸರಾಂತ ನಟಿಯ ಬ್ಯಾಕ್ ಲೆಸ್ ಫೋಸಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಲ್ಲಿವರೆಗೆ ಹಾಟ್ ಆಗಿ ಕಾಣಿಸದೆ ಇದ್ದ ನಟಿ ಒಮ್ಮಿಂದೊಮ್ಮೆಲೆ ಬ್ಯಾಕ್ ಲೆಸ್ ಫೋಟೋ ವನ್ನು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಹಾಟ್ ಫೋಟೋಗೆ ನೆಟ್ಟಿಗರು ಹಾಟೆಸ್ಟ್ ಎಂದು ಉದ್ಗಾರ ತೆಗೆದಿದ್ದಾರೆ. ಆ ನಟಿಯೇ ರಾಧಿಕಾ ನಾರಾಯಣ್.

ರಂಗಿ ತರಂಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಾಧಿಕಾ ನಾರಾಯಣ್ ನಂತರ ಯು ಟರ್ನ್, ಶಿವಾಜಿ ಸುರತ್ಕಲ್ ನಂತಹ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆನ್ನು ಪೂರ್ತಿಯಾಗಿ ಕಾಣಿಸುವಂತಹ ಫೋಟೋ ಫೋಸ್ಟ್ ಮಾಡುವ ಮೂಲಕ ಯುವ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ ಈ ನಟಿ.

ರಾಧಿಕಾ ನಾರಾಯಣ್ ಅವರ ಚೇಸ್ ಸಿನೆಮಾ ಮುಂದಿನ ಜೂನ್ ತಿಂಗಳಲ್ಲಿ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಚೇಸ್ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ. ಚೇಸ್ ಚಿತ್ರದಲ್ಲಿ ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಅವಿನಾಶ್ ದಿವಾಕರ್, ಅರವಿಂದ್ ರಾವ್, ರಾಜೇಶ್ ನಟರಂಗ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಹಾಗೆಯೇ ರಾಧಿಕಾ ನಾರಾಯಣ್ ಅವರು ರಮೇಶ್ ಅರವಿಂದ್ ನಿರ್ದೇಶನದ ಶಿವಾಜಿ ಸುರತ್ಕಲ್-2 ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

ಬ್ಯಾಕ್ ಲೆಸ್ ಫೋಟೋ ಯಾವುದೇ ಸಿನೆಮಾಗೆ ಸಂಬಂಧಿಸಿದ್ದ ಅಥವಾ ಫೋಟೋ ಶೂಟ್ ಸಂಬಂಧಿಸಿದ್ದ ಎಂದು ರಾಧಿಕಾ ನಾರಾಯಣ್ ರಿವೀಲ್ ಮಾಡಿಲ್ಲ. ಸದಾ ಒಳ್ಳೆಳ್ಳೆಯ ಸದಭಿರುಚಿಯ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವ ರಾಧಿಕಾ ನಾರಾಯಣ್ ಹಾಟ್ ಫೋಟೋ ನೋಡಿ ಅಭಿಮಾನಿಗಳು ಮುಂದಿನ ದಿನದಲ್ಲಿ ಮತ್ತಷ್ಟು ವಿಭಿನ್ನ ಪಾತ್ರಗಳಲ್ಲಿ ನಟಿಯನ್ನು ನೋಡುವ ತವಕದಲ್ಲಿದ್ದಾರೆ.

Exit mobile version