HomeNationalನಿಕಾಹ್ ಹಲಾಲ್, ಬಹುಪತ್ನಿತ್ವದ ವಿರುದ್ಧ ಮುಸ್ಲಿಂ ಮಹಿಳೆಯರ ಅರ್ಜಿ: ವಿಚಾರಣೆ ಕೈಗೆತ್ತಿಕೊಳ್ಳಲಿದೆ 5 ನ್ಯಾಯಾಧೀಶರ ಪೀಠ

ನಿಕಾಹ್ ಹಲಾಲ್, ಬಹುಪತ್ನಿತ್ವದ ವಿರುದ್ಧ ಮುಸ್ಲಿಂ ಮಹಿಳೆಯರ ಅರ್ಜಿ: ವಿಚಾರಣೆ ಕೈಗೆತ್ತಿಕೊಳ್ಳಲಿದೆ 5 ನ್ಯಾಯಾಧೀಶರ ಪೀಠ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನ ಪದ್ಧತಿಗೆ (ನಿಕಾಹ್ ಹಲಾಲ್) ಸಂಬಂಧಿಸಿದ ಸಮಸ್ಯೆಗಳನ್ನು ಹಾಗು ಬಹುಪತ್ನಿತ್ವದ ಪಿಡುಗನ್ನು ಪ್ರಶ್ನಿಸಿ ಮುಸ್ಲಿಂ ಮಹಿಳೆಯರು ಮತ್ತು ಕಾರ್ಯಕರ್ತರು ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಮಂಗಳವಾರ ಕೈಗೆತ್ತಿಕೊಂಡಿದೆ.

2017 ರ ತ್ರಿವಳಿ ತಲಾಖ್ ಪ್ರಕರಣದ ತೀರ್ಪಿನ ನಂತರ ತ್ವರಿತ ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವೆಂದು ಪರಿಗಣಿಸಿದ ನಂತರ ಎಂಟು ಸಾರ್ವಜನಿಕ ಹಿತಾಸಕ್ತಿಗಳ ಬ್ಯಾಚ್ ಅನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಯಿತು. ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ಕಾನೂನು ಪದ್ಧತಿಗಳ ಅಡಿಯಲ್ಲಿ ಪ್ರಚಲಿತದಲ್ಲಿರುವ ನಿಕಾಹ್ ಹಲಾಲಾ, ಬಹುಪತ್ನಿತ್ವ, ಮುತಾಹ್, ಮಿಸ್ಯಾರ್ ವಿವಾಹ ಸೇರಿದಂತೆ ಅನೇಕ ಆಚರಣೆಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ಸುಪ್ರೀಂ ಕೋರ್ಟಿನ ಪೀಠದ ಮುಂದೆ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿಗಳಿಗೆ ಕಕ್ಷಿದಾರರಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ), ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಹೇಮಂತ್ ಗುಪ್ತಾ, ಸೂರ್ಯ ಕಾಂತ್, ಎಂಎಂ ಸುಂದ್ರೇಶ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಬಹುಪತ್ನಿತ್ವ ಪದ್ಧತಿಯನ್ನು ಪ್ರಶ್ನಿಸಿ ಹಿಂದೂ ಮಹಿಳೆಯರ ಗುಂಪು ಸಲ್ಲಿಸಿದ ಮತ್ತೊಂದು ಪ್ರತ್ಯೇಕ ಅರ್ಜಿಯ ಆಧಾರದ ಮೇಲೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.

ವಿಚಾರಣೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ತ್ರಿವಳಿ ತಲಾಖ್‌ಗೆ ಬಲಿಯಾದ ಅರ್ಜಿದಾರರಲ್ಲಿ ಒಬ್ಬರಾದ ಸಮೀನಾ ಬೇಗಂ ಅವರು ಸುಪ್ರೀಂ ಕೋರ್ಟಿನಿಂದ ನ್ಯಾಯ ಸಿಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

“ಇತರ ಅರ್ಜಿದಾರರು ಮತ್ತು ನಾನು ನೋವು ಅನುಭವಿಸಿದ್ದೇವೆ ಮತ್ತು ಇನ್ನೊಬ್ಬ ಹುಡುಗಿ ನಮ್ಮಂತೆ ಆಗಬಾರದು ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನನಗೆ ತಲಾಖ್ ನೀಡಲಾಯಿತು ಮತ್ತು ನಂತರ ನನ್ನ ಪತಿ ಹಲಾಲಾಗೆ ಒತ್ತಾಯಿಸಿದರು. ನನ್ನ ಕುಟುಂಬ ನನಗೆ ಬೆಂಬಲ ನೀಡಿದ್ದರಿಂದ ಮಾತ್ರ ನಾನು ಸುಪ್ರೀಂ ಕೋರ್ಟ್ ತಲುಪಲು ಸಾಧ್ಯವಾಯಿತು” ಎಂದು ಸಮೀನಾ ಬೇಗಂ ಹೇಳಿದರು.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments