
ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಲೋಕದ ದಿಗ್ಗಜ, ಉದ್ಯಮಿ ರಾಕೇಶ್ ಜುಂಜುನ್ ವಾಲಾ ಇಂದು (ಭಾನುವಾರ) ಬೆಳಗ್ಗೆ 6.45ಕ್ಕೆ ನಿಧನರಾಗಿದ್ದಾರೆ. 62 ವರ್ಷ ವಯಸ್ಸಿನ ರಾಕೇಶ್ ಜುಂಜುನ್ ವಾಲಾ ಅವರನ್ನು ಭಾರತದ ‘ವಾರೆನ್ ಬಫೆಟ್’ ಎಂದೇ ಕರೆಯುತ್ತಿದ್ದರು.
ಅನಾರೋಗ್ಯಕ್ಕೀಡಾಗಿದ್ದ ರಾಕೇಶ್ ಜುಂಜುನ್ ವಾಲಾ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಜುಂಜುನ್‌ವಾಲಾ ಅವರು ರೇರ್ ಎಂಟರ್‌ಪ್ರೈಸಸ್ ಎಂಬ ಖಾಸಗಿ ಒಡೆತನದ ಷೇರು ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದರು. ಅಲ್ಲದೆ ಇದೆ ಆಗಸ್ಟ್ ತಿಂಗಳ ಆರಂಭದಲ್ಲಿ ಭಾರತದ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್ ಅನ್ನು ಸ್ಥಾಪಿಸಿದ್ದರು.
ಭಾರತದ ಷೇರು ಮಾರುಕಟ್ಟೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು ಖರೀದಿಸಿದ ಬಹುತೇಕ ಷೇರುಗಳು ಉತ್ತಮ ವಹಿವಾಟು ನಡೆಸಿ ಅಪಾರ ಹಣ ಗಳಿಸುತ್ತಿದ್ದವು. ಅವರು ಮುಟ್ಟಿದ ಷೇರುಗಳು ಲಾಭ ಗಳಿಸೋದು ಗ್ಯಾರಂಟಿ ಅನ್ನುವ ಮಟ್ಟದಲ್ಲಿ ಅವರು ಷೇರು ಜ್ಞಾನ ಹೊಂದಿದ್ದರು.