HomeNationalಉತ್ತರಾಖಂಡ: ತಾನು ಸೋತು ಪಕ್ಷ ಗೆಲ್ಲಿಸಿದವನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಬಿಜೆಪಿ

ಉತ್ತರಾಖಂಡ: ತಾನು ಸೋತು ಪಕ್ಷ ಗೆಲ್ಲಿಸಿದವನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಬಿಜೆಪಿ

ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರೂ ಹಂಗಾಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯನ್ನೇ ಮತ್ತೆ ಉತ್ತರಾಖಂಡದ ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಆರಿಸಿದೆ. ಉತ್ತರಾಖಂಡದ ನೂತನ ಶಾಸಕಾಂಗ ಪಕ್ಷದ ಸಭೆಯಲ್ಲಿ ಧಾಮಿ ಅವರನ್ನು ನಾಯಕನನ್ನಾಗಿ ಆರಿಸಲಾಗಿತ್ತು.

ಮುಖ್ಯಮಂತ್ರಿ ಧಾಮಿ ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗಿದ್ದ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಆದರೆ ತಾನು ಯಾವಾಗಲೂ ಗೆಲ್ಲುತ್ತಿದ್ದ ಭದ್ರಕೋಟೆಯಲ್ಲೇ ಪುಷ್ಕರ್ ಧಾಮಿ ಸೋಲು ಕಂಡಿದ್ದರು. ಆದರೆ ಪಕ್ಷ 70 ಸ್ಥಾನಗಳಲ್ಲಿ 47ನ್ನು ಗೆದ್ದು ಅದ್ಭುತ ವಿಜಯ ಸಾಧಿಸಿ ಮರಳಿ ಅಧಿಕಾರ ಪಡೆದಿತ್ತು.

ಇಂದಿನ ಮಹತ್ವದ ಸಭೆಯಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವೀಕ್ಷಕರಾಗಿ ಸಚಿವ ರಾಜನಾಥ್ ಸಿಂಗ್ ಹಾಗು ಮೀನಾಕ್ಷಿ ಲೇಖಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments