
ಇಸ್ಲಾಮಾಬಾದ್: ಪಿಎನ್ಎಸ್ ತುಘರಿಲ್ ಎನ್ನುವ ಹೆಸರಿನ ಅತ್ಯಾಧುನಿಕ ಯುದ್ಧ ನೌಕೆಯನ್ನು ಚೀನಾ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ. ನೌಕೆಯು ಅತ್ಯಾಧುನಿಕ ವಾಗಿದ್ದು ವೈರಿ ನೌಕೆಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಶಾಂಘೈನಲ್ಲಿ ನಡೆದ ಸಮಾರಂಭದಲ್ಲಿ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಯಿತು ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿಯನ್ನು ಮಾಡಿದೆ. ಇದಲ್ಲದೆ ಪಾಕಿಸ್ತಾನವು ಚೀನಾದ ಸಹಕಾರದಿಂದ JF-17 ಹೆಸರಿನ ಯುದ್ಧ ವಿಮಾನಗಳನ್ನು ಸಹ ನಿರ್ಮಿಸುತ್ತಿದೆ.
ಚೀನಾ ಪಾಕಿಸ್ತಾನದ ಗ್ವಾಧಾರ್ ಬಂದರನ್ನು ಅಭಿವೃದ್ದಿಪಡಿಸುತ್ತಿದ್ದು ಪಾಕಿಸ್ತಾನದ ಮೂಲಕ ಹಾದುಹೋಗುವ ಚೀನಾ-ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ (CPEC) ಯೋಜನೆಗೆ ಸುಮಾರು 60 ಬಿಲಿಯನ್ ಡಾಲರ್ ಹಣವನ್ನು ವಿನಿಯೋಗಿಸುತ್ತದೆ.