National

ಸ್ಕಾರ್ಪಿನ್ ಶ್ರೇಣಿಯ ಇನ್ನೊಂದು ಜಲಾಂತರ್ಗಾಮಿ ಭಾರತೀಯ ನೌಕಾಪಡೆಗೆ ಸೇರ್ಪಡೆ

ನವದೆಹಲಿ: ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ತುಂಬಲು ಮತ್ತೊಂದು ಶಕ್ತಿ ಜತೆಯಾಗಿದೆ. P 75 ಯೋಜನೆಯಡಿಯಲ್ಲಿ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ಗಳನ್ನು ನಿರ್ಮಿಸಲಾಗುತ್ತಿದ್ದು ಅವುಗಳಲ್ಲಿ ನಾಲ್ಕನೆಯ ಜಲಾಂತರ್ಗಾಮಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ. ಇದನ್ನು ಐಎನ್ಎಸ್ ವೇಲ ಎಂದು ಹೆಸರಿಸಲಾಗಿದೆ.

ಇದನ್ನು ಮುಂಬೈನ ಮಜಗಾಂವ್ ಡಾಕ್ ಲಿಮಿಟೆಡ್ ಹಡಗು ಕಟ್ಟೆಯಲ್ಲಿ ನಿರ್ಮಿಸಲಾಗಿದೆ. ಇದನ್ನು ನಿರ್ಮಿಸಲು ಫ್ರಾನ್ಸ್ ದೇಶದ ಸಂಸ್ಥೆಯು ತಂತ್ರಜ್ಞಾನದ ವರ್ಗಾವಣೆ ನೆರವನ್ನು ನೀಡಿದೆ. ಇದಕ್ಕೂ ಮೊದಲು ಸ್ಕಾರ್ಪಿನ್ ಶ್ರೇಣಿಗೆ ಸೇರಿದ ಐಎನ್ಎಸ್ ಕಲ್ವರಿ, ಐಎನ್ಎಸ್ ಖಂಡೇರಿ ಐಎನ್ಎಸ್ ಕಾರಂಜ ಹೆಸರಿನ ಮೂರು ಜಲಾಂತರ್ಗಾಮಿಗಳ ನಿರ್ಮಾಣವನ್ನು ಇದೇ ಹಡಗು ಕಟ್ಟೆಯಲ್ಲಿ ಮಾಡಲಾಗಿತ್ತು.

Exit mobile version