HomeNationalವಿಶ್ವದಾದ್ಯಂತ ವಾಟ್ಸಾಪ್, ಫೇಸ್ಬುಕ್ ಸ್ಥಗಿತ: ಬಳಕೆದಾರರ ಪರದಾಟ

ವಿಶ್ವದಾದ್ಯಂತ ವಾಟ್ಸಾಪ್, ಫೇಸ್ಬುಕ್ ಸ್ಥಗಿತ: ಬಳಕೆದಾರರ ಪರದಾಟ

ನವದೆಹಲಿ: ಭಾರತ ಸೇರಿದಂತೆ ವಿಶ್ವದ ಹಲವೆಡೆ ಸೋಮವಾರ ಸಂಜೆಯಿಂದ ಮಂಗಳವಾರ ಮುಂಜಾವಿನವರೆಗೆ ಬಹತೇಕ ಬಳಕೆದಾರರ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಗಳು ಸ್ಥಗಿತಗೊಂಡಿದ್ದವು. ವಾಟ್ಸಾಪ್ ನಲ್ಲಿ ಹೊಸ ಸಂದೇಶಗಳನ್ನು ಕಳುಹಿಸಲು ಹಾಗು ಪಡೆದುಕೊಳ್ಳಲು ಸಾಧ್ಯವಾಗದೆ ಕೋಟ್ಯಂತರ ಬಳಕೆದಾರರು ಪರದಾಡಿದರು.

ಅಂಕಿ ಅಂಶಗಳ ಪ್ರಕಾರ ಶೇಕಡಾ 40ರಷ್ಟು ಬಳಕೆದಾರರಿಗೆ ವಾಟ್ಸಾಪ್ ಡೌನ್ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಶೇಕಡಾ 30 ರಷ್ಟು ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಹಾಗು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಹಾಗು ಶೇಕಡಾ 22ರಷ್ಟು ಜನರು ವಾಟ್ಸಾಪ್ ವೆಬ್ ಆವೃತ್ತಿಗಳಲ್ಲಿ ತೊಂದರೆ ಎದುರಿಸಿದ್ದಾರೆ.

ಈ ಸುದೀರ್ಘ ಸರ್ವರ್ ಡೌನ್ ತೊಂದರೆ ಕುರಿತು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ಸ್ ಜುಗರ್ಬರ್ಗ್ ಮಂಗಳವಾರ ಕ್ಷಮೆ ಕೋರಿದ್ದಾರೆ. ‘ಫೇಸ್ಬುಕ್ , ವಾಟ್ಸಾಪ್, ಇನ್ಸ್ಟಾಗ್ರಾಮ್ ಇದೀಗ ಸರಿಯಾಗಿದೆ. ನನಗೆ ಗೊತ್ತಿದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಪರ್ಕ ಹೊಂದಲು ನಮ್ಮ ಸೇವೆಗಳಿಗೆ ಅದೆಷ್ಟು ಅವಲಂಬಿತರಾಗಿದ್ದೀರಿ ಎಂದು. ತೊಂದರೆಗಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಜುಗರ್ಬರ್ಗ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments