HomeNationalಜಿಡಿಪಿ ಬೆಳವಣಿಗೆಯ ದರವನ್ನು ಸಾಧಿಸಿದ ಭಾರತ

ಜಿಡಿಪಿ ಬೆಳವಣಿಗೆಯ ದರವನ್ನು ಸಾಧಿಸಿದ ಭಾರತ

ನವದೆಹಲಿ: 2021-22 ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಭಾರತದ ಜಿಡಿಪಿ ಬೆಳವಣಿಗೆಯ ದರ 20.1 ಶೇಕಡಾ ಮುಟ್ಟಿರುವುದು ದೇಶಕ್ಕೆ ಸಂತಸದ ವಿಚಾರ. ಈ ಭಾರಿ ಆರ್ಥಿಕ ಬೆಳವಣಿಗೆಯ ವೇಗ ಭಾರತವನ್ನು ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನಾಗಿಸಿದೆ.

ಆದರೆ ಇಲ್ಲಿ ಜಿಡಿಪಿಯ ಬೆಳವಣಿಗೆಯ ದರವನ್ನು ಲೆಕ್ಕ ಹಾಕಿರುವುದು ಹೋದ ವರ್ಷದಲ್ಲಿ ಇದೆ ತ್ರೈಮಾಸಿಕದಲ್ಲಿನ ಜಿ.ಡಿ.ಪಿ ಯನ್ನು ಗಣನೆಗೆ ತೆಗೆದುಕೊಂಡು. 2020ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಜಿಡಿಪಿ 26.95 ಲಕ್ಷ ಕೋಟಿಗೆ ಇಳಿಕೆಯಾಗಿತ್ತು. ಕರಣ ದೇಶದಾದ್ಯಂತ ವಿಧಿಸಿದ್ದ ಲಾಕ್ ಡೌನ್. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಜಿಡಿಪಿ 32.38 ಲಕ್ಷ ಕೋಟಿಗಳಾಗಿದೆ. ಹಾಗಾಗಿ ಜಿ.ಡಿ.ಪಿ ಬೆಳವಣಿಗೆಯ ದರ 20.1 ಶೇಕಡಾ ಆಗಿದೆ ಎನ್ನಬಹುದು. ಆರ್ಥಿಕ ಚಟುವಟಿಕೆಗಳು ಗರಿಗೆದರಿರುವುದು ಸಹ, ಜಿಡಿಪಿಯ ಬೆಳವಣಿಗೆ ಕಾರಣ ಎಂಬುದು ಸ್ಪಷ್ಟ.

ಆದರೆ 2019ರ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ಜಿಡಿಪಿ 35.66 ಲಕ್ಷ ಕೋಟಿಗಳಾಗಿತ್ತು. ಅದನ್ನು ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿಯೊಂದಿಗೆ ಹೋಲಿಸಿದರೆ ಭಾರತ ಇನ್ನೂ ಕೊರೊನದ ಆಘಾತದಿಂದ ಹೊರ ಬಾರದಿರುವುದು ಸ್ಪಷ್ಟವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments