National

ಜ್ಞಾನವ್ಯಾಪಿ ಮಸೀದಿ ವಿವಾದ: ಅರ್ಜಿದಾರ ಹಿಂದೂ ಮಹಿಳೆಗೆ ಕನಯ್ಯಾ ಲಾಲ್ ರೀತಿ ‘ಸರ್ ತನ್ ಸೆ ಜುದಾ’ ಬೆದರಿಕೆ

ವಾರಣಾಸಿ: ಹಿಂದೂ ದೇಗುಲ ನಾಶ ಮಾಡಿ ನಿರ್ಮಾಣ ಮಾಡಿದ ಜ್ಞಾನವ್ಯಾಪಿ ಮಸೀದಿಯಲ್ಲಿರುವ ಶೃಂಗಾರ್ ಗೌರಿ ದೇವರಿಗೆ ನಿತ್ಯ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಐವರು ಅರ್ಜಿದಾರರ ಪೈಕಿ ಒಬ್ಬರ ಪತಿಗೆ ಪಾಕಿಸ್ತಾನದ ಫೋನ್ ನಂಬರ್‌ನಿಂದ ಅರ್ಜಿಯನ್ನು ಹಿಂಪಡೆಯುವಂತೆ ಬೆದರಿಕೆ ಕರೆಗಳು ಬಂದಿವೆ ಎಂದು ಬೆಳಕಿಗೆ ಬಂದಿದೆ. ರಾಜಸ್ಥಾನದಲ್ಲಿ ಕನಯ ಲಾಲ್ ತಲೆ ಕಡಿದಂತೆ “ಸರ್ ತನ್ ಸೆ ಜುದಾ” ಮಾಡಲಾಗುವುದು ಎಂದು ಮುಸ್ಲಿಂ ಮತಾಂಧರು ಬೆದರಿಕೆ ಹಾಕಿದ್ದಾರೆ.

ಜುಲೈ 19 ಮತ್ತು 20 ರಂದು ಬೆದರಿಕೆ ಕರೆಗಳು ಬಂದಿವೆ ಎಂದು ಐವರು ಫಿರ್ಯಾದಿಗಳಲ್ಲಿ ಒಬ್ಬರಾದ ಲಕ್ಷ್ಮಿ ದೇವಿ ಅವರ ಪತಿ ಸೋಹನ್ ಲಾಲ್ ಆರ್ಯ ಹೇಳಿದ್ದಾರೆ. ಈ ಬಗ್ಗೆ ತಡವಾಗಿ ಪೊಲೀಸರಿಗೆ ತಿಳಿಸಿದ್ದಾರೆ. ದೂರಿನ ಮೇರೆಗೆ ಲಕ್ಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 19 ರಂದು ಕೂಡ ತನಗೆ ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು ಎಂದು ಆರ್ಯ ಹೇಳಿಕೊಂಡಿದ್ದಾರೆ.

“ಕರೆ ಮಾಡಿದವರು ರಾಜಸ್ಥಾನದ ಕನ್ಹಯ್ಯಾ ಅವರಂತೆ ಶಿರಚ್ಛೇದನಕ್ಕೆ ಸಂಬಂಧಿಸಿದ ‘ಸರ್ ತನ್ ಸೆ ಜುದಾ’ ಘೋಷಣೆಯೊಂದಿಗೆ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಪ್ರಕರಣವನ್ನು ಹಿಂಪಡೆಯಲು ನಮಗೆ ಒತ್ತಡ ಹೇರಲು ಕರೆ ಮಾಡಿದವರು ಭೀಕರ ಪರಿಣಾಮಗಳ ಬೆದರಿಕೆಗಳನ್ನು ನೀಡುತ್ತಿದ್ದಾರೆ. ಆಗಸ್ಟ್ 3 ರಂದು ಕೂಡ ಅದೇ ನಂಬರಿನಿಂದ ಮಿಸ್ಡ್ ಕಾಲ್ ಇತ್ತು”ಎಂದು ಆರ್ಯ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಹಿಳೆಯರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಪೂಜೆ ಮಾಡಲು ಅನುಮತಿ ಕೋರಿದ್ದಾರೆ. ಇಲ್ಲಿ 1993 ರವರೆಗೆ ದೇವತೆಗಳನ್ನು ಪೂಜಿಸಲಾಗುತ್ತಿತ್ತು. ಮತ್ತೆ ಅದನ್ನೇ ಮುಂದುವರೆಸಲು ಕೋರ್ಟು ಮೆಟ್ಟಿಲು ಏರಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version