ವಾರಣಾಸಿ: ವಾರಣಾಸಿಯ ವಿವಾದಿತ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆಯು ಬಿಗಿ ಭದ್ರತೆಯೊಂದಿಗೆ ಇಂದು ಪುನರಾರಂಭವಾಗಿದೆ. ಮಸೀದಿ ಆಡಳಿತ ಸಮಿತಿಯು ಸ್ಥಳೀಯ ನ್ಯಾಯಾಲಯದಿಂದ ನಿಯೋಜಿಸಿದ ತಂಡದೊಂದಿಗೆ ಸದ್ಯಕ್ಕೆ ಸಹಕರಿಸುವುದಾಗಿ ಸೂಚಿಸಿದೆ. ಕೋರ್ಟ್ ಆದೇಶ ಇದ್ದರೂ ವಿಡಿಯೋಗ್ರಫಿ ಸಮೀಕ್ಷೆ ತಂಡಕ್ಕೆ ಕಳೆದ ಕೆಲ ದಿನಗಳಿಂದ ವಿವಾದಿತ ಜ್ಞಾನವ್ಯಾಪಿ ಮಸೀದಿಯ ಆಡಳಿತ ಮಂಡಳಿ ಹಾಗು ಸ್ಥಳೀಯ ಮುಸ್ಲಿಮರ ಗುಂಪು ಮಸೀದಿ ಒಳ ಹೋಗಲು ಬಿಡದೆ ಡ್ರಾಮಾ ಸೃಷ್ಟಿಸಿತ್ತು. ಆ ಅವಧಿಯಲ್ಲಿ ಮಸೀದಿ ಒಳಗಿರುವ ಹಿಂದೂ ಕುರುಹುಗಳ ಸಾಕ್ಷ್ಯ ನಾಶ ಮಾಡುವ ಭೀತಿಯೂ ಎದುರಾಗಿತ್ತು.

ಪ್ರಸ್ತುತ, ತಂಡವು ಮಸೀದಿಯ ಪಶ್ಚಿಮ ಗೋಡೆಯ ಪ್ರದೇಶದಲ್ಲಿ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆಗಾಗಿ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಗೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ಬಿಗಿಯಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಮೈದಾಗಿನ್ ಮತ್ತು ಗೊಡೋಲಿಯಾ ಪ್ರದೇಶಗಳ ನಡುವಿನ ರಸ್ತೆಯಲ್ಲಿ ಪಾದಚಾರಿಗಳಿಗೆ ಸಹ ಸಂಚಾರಕ್ಕೆ ಅವಕಾಶ ನೀಡಲಾಗಿಲ್ಲ.
ಇತ್ತೀಚಿನ ವರದಿಗಳ ಪ್ರಕಾರ, ಎಲ್ಲಾ ಮೂರು ಭೂಗತ ಸೆಲ್ಲಾರ್ಗಳನ್ನು ಸಮೀಕ್ಷೆ ಮಾಡಲಾಗಿದೆ. ಎರಡೂ ಕಡೆಯ ಸರ್ವೆ ತಂಡದ ಸದಸ್ಯರು, ಅರ್ಜಿದಾರರು, ಪ್ರತಿವಾದಿಗಳು ಮತ್ತು ಆಡಳಿತದ ಅಧಿಕಾರಿಗಳು ಸೇರಿದಂತೆ ಒಟ್ಟು 52 ಜನರು ಸ್ಥಳಕ್ಕೆ ಪ್ರವೇಶಿಸಿದ್ದಾರೆ.
ಈ ವಿವಾದಿತ ಮಸೀದಿಯು ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲಿದೆ ಮತ್ತು ಅದರ ಹೊರ ಗೋಡೆಗಳ ಮೇಲಿನ ಹಿಂದೂ ದೇವತೆಗಳ ವಿಗ್ರಹಗಳ ಮುಂದೆ ದೈನಂದಿನ ಪ್ರಾರ್ಥನೆಗೆ ಅನುಮತಿ ಕೋರಿ 5 ಮಂದಿ ಹಿಂದೂ ಮಹಿಳೆಯರ ಗುಂಪು ಸಲ್ಲಿಸಿದ್ದ ಮನವಿಯನ್ನು ಸ್ಥಳೀಯ ನ್ಯಾಯಾಲಯವು ಆಲಿಸುತ್ತಿದೆ.
ಓರಂಗಜೇಬ ವಾರಣಾಸಿಯಲ್ಲಿದ್ದ ಶಿವ ದೇವಾಲಯಗಳನ್ನು ಹಾನಿ ಮಾಡಿ ಆ ಜಾಗದಲ್ಲಿ ಮಸೀದಿಯನ್ನು ಕಟ್ಟಿದ್ದ ಎಂದು ಇತಿಹಾಸ ಹೇಳುತ್ತವೆ. ಅಲ್ಲದೆ ಆ ವಿವಾದಿತ ಜ್ಞಾನವ್ಯಾಪಿ ಮಸೀದಿಯ ತುಂಬಾ ಹಿಂದೂ ಧಾರ್ಮಿಕ ಕುರುಹುಗಳು ಇಂದಿಗೂ ಕಂಡು ಬರುತ್ತವೆ. ದೇಶದ ತುಂಬಾ ಇಂತಹ ನೂರಾರು ಮಸೀದಿಗಳು ಹಿಂದೂ ದೇಗುಲಗಳನ್ನು ಕೆಡವಿ ಕಟ್ಟಲಾಗಿದೆ. ಕೃಷ್ಣನ ಭೂಮಿ ಮಥುರಾದ ಮಸೀದಿಯೂ ಇದರಲ್ಲಿ ಒಂದಾಗಿದೆ.
ನಮ್ಮ ವಾಟ್ಸಾಪ್ ಗುಂಪು ಸೇರಲಿ ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd












































