HomeNationalಕುರಾನ್ ಪ್ರಕಾರ ಹಿಜಾಬ್ ಮಹಿಳೆಯರ ಡ್ರೆಸ್ ಕೋಡ್‌ಗೆ ಸಂಬಂಧಿಸಿಲ್ಲ; ಇಸ್ಲಾಂಗೆ ಹಿಜಾಬ್ ಅನಿವಾರ್ಯವಲ್ಲ: ಕೇರಳ ರಾಜ್ಯಪಾಲ...

ಕುರಾನ್ ಪ್ರಕಾರ ಹಿಜಾಬ್ ಮಹಿಳೆಯರ ಡ್ರೆಸ್ ಕೋಡ್‌ಗೆ ಸಂಬಂಧಿಸಿಲ್ಲ; ಇಸ್ಲಾಂಗೆ ಹಿಜಾಬ್ ಅನಿವಾರ್ಯವಲ್ಲ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ತಿರುವನಂತಪುರಂ: ಸಿಖ್ ಧರ್ಮದಲ್ಲಿ ಪೇಟ ಅವರ ಧಾರ್ಮಿಕ ಭಾಗವಾಗಿರುವಂತೆ ಹಿಜಾಬ್ ಇಸ್ಲಾಂನ ಭಾಗವಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಕುರಾನ್‌ನಲ್ಲಿ ಏಳು ಬಾರಿ ಹಿಜಾಬ್ ಅನ್ನು ಉಲ್ಲೇಖಿಸಲಾಗಿದೆ, ಆದರೆ ಅದು ಮಹಿಳೆಯರ ಡ್ರೆಸ್ ಕೋಡ್‌ ಆಗಿ ಅಲ್ಲ. ಕುರಾನ್ ಅಲ್ಲಿ ಉಲ್ಲೇಖಿಸಿದ್ದು ‘ಪರ್ದಾ’ಗೆ ಸಂಬಂಧಿಸಿದೆ, ಅಂದರೆ ನೀವು ಮಾತನಾಡುವಾಗ ನಡುವೆ ‘ಪರ್ದಾ’ ಇರಬೇಕು ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಹಿಜಾಬ್ ಧರಿಸುವುದನ್ನು ಸಿಖ್ ಧರ್ಮದ ಅವಿಭಾಜ್ಯ ಅಂಗವಾದ ಪೇಟ ಧರಿಸುವುದರೊಂದಿಗೆ ಸಮೀಕರಿಸುತ್ತಿರುವುದು ಅಸಂಬದ್ಧ ಎಂದು ಕೇರಳ ರಾಜ್ಯಪಾಲರು ಹೇಳಿದರು. ಇಡೀ ವಿವಾದವು ಮುಸ್ಲಿಂ ಮಹಿಳೆಯರು ಹೊಂದುತ್ತಿರುವ ಪ್ರಗತಿಯನ್ನು ಹಳಿತಪ್ಪಿಸುವ ಸಂಚು ಎಂದು ಖಾನ್ ಹೇಳಿದರು.

ಸಿಖ್ ಮತೀಯರಿಗೆ ಎಲ್ಲ ಕಡೆ ಪೇಟ ಧರಿಸಲು ಅವಕಾಶವಿದೆ. ಆದರೆ ಮುಸ್ಲಿಂ ಹುಡುಗಿಯರಿಗೆ ತರಗತಿಯೊಳಗೆ ಹಿಜಾಬ್ ಧರಿಸಲು ಬಿಡುತ್ತಿಲ್ಲ ಎಂಬ ವಾದವು ಅಸಂಬದ್ಧವಾಗಿದೆ. ಪೇಟವು ಸಿಖ್ ಧರ್ಮದ ಅತ್ಯಗತ್ಯ ಭಾಗವಾಗಿದೆ. ಆದರೆ ಹಿಜಾಬ್ ಅನ್ನು ಕುರಾನ್‌ನಲ್ಲಿ ಇಸ್ಲಾಂನ ಅತ್ಯಗತ್ಯ ಭಾಗವೆಂದು ಉಲ್ಲೇಖಿಸಲಾಗಿಲ್ಲ.” ಎಂದು ರಾಜ್ಯಪಾಲರು ಅವರು ಹೇಳಿದರು.

“ನಾನು ನಿಮಗೆ ಕೇವಲ ಒಂದು ಉಲ್ಲೇಖವನ್ನು ಹೇಳುತ್ತೇನೆ. ಒಬ್ಬಳು ಚಿಕ್ಕ ಹುಡುಗಿ, ಸ್ವತಃ ಪ್ರವಾದಿಯವರ ಮನೆಯಲ್ಲಿ ಬೆಳೆದಳು. ಅತಿ ಸುಂದರವಾಗಿದ್ದ ಅವಳು ಪವಿತ್ರ ಪ್ರವಾದಿಯ ಹೆಂಡತಿಯ ಸೊಸೆ. ಅವಳು ಹೇಳಿದಳು, ಜನರು ನನ್ನ ಸೌಂದರ್ಯವನ್ನು ನೋಡಬೇಕು ಮತ್ತು ನನ್ನ ಸೌಂದರ್ಯದಲ್ಲಿ ದೇವರ ಅನುಭೂತಿಯನ್ನು ನೋಡಬೇಕೆಂದು ನಾನು ಬಯಸುತ್ತೇನೆ ಮತ್ತು ದೇವರಿಗೆ ಕೃತಜ್ಞರಾಗಿರಬೇಕೆಂದು ಬಯಸುತ್ತೇನೆ ಎಂದು. ಇದು ಇಸ್ಲಾಮಿನ ಮೊದಲ ತಲೆಮಾರಿನ ಮಹಿಳೆಯರು ವರ್ತಿಸುತ್ತಿದ್ದ ರೀತಿ. ಇಷ್ಟೇ ನಾನು ಹೇಳಲು ಇಚ್ಚಿಸುವುದು.” ಎಂದು ಕೇರಳ ರಾಜ್ಯಪಾಲರು ಹೇಳಿದರು

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments