HomeNationalಹಿಮಾಚಲ ಪ್ರದೇಶದಲ್ಲಿ ಕೈಗೆ ಮುಖಭಂಗ: ಅಡ್ಡಮತದಾನದಿಂದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿಗೆ ಸೋಲು

ಹಿಮಾಚಲ ಪ್ರದೇಶದಲ್ಲಿ ಕೈಗೆ ಮುಖಭಂಗ: ಅಡ್ಡಮತದಾನದಿಂದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿಗೆ ಸೋಲು

ಶಿಮ್ಲಾ: ರಾಜ್ಯಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಅಡ್ಡಮತದಾನದಿಂದಾಗಿ ಸೋಲಾಗಿದ್ದು 40 ಶಾಸಕರನ್ನು ಹೊಂದಿದ್ದರೂ ಗೆಲ್ಲಲಾರದೆ ಮುಖಭಂಗ ಅನುಭವಿಸಿದೆ. ಕೇವಲ 25 ಶಾಸಕರನ್ನು ಹೊಂದಿರುವ ಬಿಜೆಪಿ ಜಯಭೇರಿ ಬಾರಿಸಿದೆ. ಕೈ ಶಾಸಕರು ಮಾಡಿದ ಅಡ್ಡಮತದಾನದ ಪರಿಣಾಮ ಕೈ ನಾಯಕ ಅಭಿಷೇಕ್ ಮನು ಸಿಂಘ್ವಿ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಗೆಲುವಿನ ನಗೆ ಬೀರಿದ್ದಾರೆ.

ಇಬ್ಬರೂ ಅಭ್ಯರ್ಥಿಗಳ ಪರವಾಗಿ ತಲಾ 34 ಮತಗಳು ಚಲಾವಣೆಯಾಗಿದ್ದು ಅಂತಿಮವಾಗಿ ಚೀಟಿ ಎತ್ತುವ ಮೂಲಕ ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. ಒಟ್ಟು 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ 40 ಶಾಸಕರನ್ನು ಹಾಗು ಪಕ್ಷೇತರರ ಬೆಂಬವನ್ನು ಕೂಡ ಪಡೆದಿದ್ದರೂ ಅಭ್ಯರ್ಥಿ ಸೋತಿರುವುದು ಪಕ್ಷಕ್ಕೆ ಆಘಾತ ಉಂಟು ಮಾಡಿದೆ. ಕಾಂಗ್ರೆಸ್ ನ ಒಂಬತ್ತು ಶಾಸಕರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಫಲಿತಾಂಶದಿಂದ ತಿಳಿದುಬಂದಿದೆ.

RELATED ARTICLES

ಪ್ರಮುಖ ಸುದ್ದಿಗಳು

Recent Comments