HomeNationalಹಿಂದೂ ಹೊಸ ವರ್ಷಾಚರಣೆಯ ಬೈಕ್ ರ‍್ಯಾಲಿ: ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ದಾಳಿ: ವಾಹನಗಳಿಗೆ...

ಹಿಂದೂ ಹೊಸ ವರ್ಷಾಚರಣೆಯ ಬೈಕ್ ರ‍್ಯಾಲಿ: ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ದಾಳಿ: ವಾಹನಗಳಿಗೆ ಬೆಂಕಿ, ಹಲವರು ಗಂಭೀರ

ಕರೌಲಿ/ ರಾಜಸ್ಥಾನ: ಜಗತ್ತಿನಾದ್ಯಂತ ಹಿಂದೂಗಳು ಹಿಂದೂ ಹೊಸ ವರ್ಷದ ಆಗಮನವನ್ನು ಆಚರಿಸುತ್ತಿರುವಾಗ, ರಾಜಸ್ಥಾನದ ಕರೌಲಿಯ ಹಿಂದೂಗಳು ಇಸ್ಲಾಂನ ಭಯೋತ್ಪಾದಕರ ಕ್ರೌರ್ಯವನ್ನು ಅನುಭವಿಸುತ್ತಿದ್ದಾರೆ. ಹಿಂದೂ ಹೊಸ ವರ್ಷವನ್ನು ಆಚರಿಸಲು ಆಯೋಜಿಸಲಾಗಿದ್ದ ಬೈಕ್ ರ್ಯಾಲಿ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಹಾದು ಹೋಗುತ್ತಿದ್ದ ಸಂದರ್ಭ ಕಲ್ಲು ತೂರಾಟ ನಡೆದಿದ್ದು, ನಗರದಲ್ಲಿ ಹಿಂಸಾಚಾರ ನಡೆದಿದೆ.

ಕರೌಲಿಯ ಮುಸ್ಲಿಂಮೇರ್ ಅಧಿಕವಿರುವ ಹತ್ವಾರಾ ಬಜಾರ್ ಮೂಲಕ ಬೈಕ್ ಸವಾರರು ಹಾದು ಹೋಗುತ್ತಿದ್ದಾಗ ದಾಳಿ ನಡೆದಿದೆ. ಹಿಂದೂ ಬೈಕರ್‌ಗಳ ಮೇಲೆ ಕಲ್ಲು ತೂರಾಟ ಆರಂಭಿಸಿದ ದುಷ್ಕರ್ಮಿಗಳು ಭಾರೀ ಗಾತ್ರದ ಕಲ್ಲುಗಳನ್ನು ಮೇಲಿನಿಂದ ಎತ್ತಿ ಹಾಕುತ್ತಿದ್ದುದು ಕಂಡು ಬಂತು. ಅಲ್ಲದೆ ಮುಸ್ಲಿಂ ದುಷ್ಕರ್ಮಿಗಳು ಹನ್ನೆರಡು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಸಾಗಿತು. ಜತೆಗೆ ಮೂರು ಬೈಕ್‌ಗಳು ಕೂಡ ಮುಸ್ಲಿಮರಿಂದ ಬೆಂಕಿಗಾಹುತಿಯಾಯಿತು. ಇದರಿಂದಾಗಿ ಲಕ್ಷಾಂತರ ಮೌಲ್ಯದ ಆಸ್ತಿ ನಾಶವಾಗಿದೆ ಎಂದು ವರದಿಯಾಗಿದೆ.

ದಾಳಿಯಲ್ಲಿ ಈವರೆಗಿನ ವರದಿಯಂತೆ 43 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಪೊಲೀಸರು ಕೂಡ ಸೇರಿದ್ದಾರೆ. ಎಲ್ಲಾ ಸಂತ್ರಸ್ತರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳು ಪೊಲೀಸರು ರ‍್ಯಾಲಿಯ ಜೊತೆಗಿದ್ದರು ಮತ್ತು ರ‍್ಯಾಲಿಯು ಮುಸ್ಲಿಂ ಕಾಲೋನಿ ಮೂಲಕ ಹಾದು ಹೋಗುತ್ತಿದ್ದಾಗ ಕಲ್ಲು ತೂರಾಟಕ್ಕೆ ಒಳಗಾಗಿದ್ದರು. ಗಾಯಾಳುಗಳ ಪೈಕಿ ಪುಷ್ಪೇಂದ್ರ ಎಂಬವರ ಸ್ಥಿತಿ ಚಿಂತಾಜನಕವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments