National

ಹೌರಾ: ಪ್ರವಾದಿ ಪರ ಹಿಂಸಾಚಾರದ ಮಧ್ಯೆಯೂ ಮುಸ್ಲಿಂ ವಿಧವೆಯ ಮಗಳ ಮದುವೆಗೆ ಸಹಾಯ ಮಾಡಿದ ಹಿಂದೂಗಳು!

ಕೋಲ್ಕತ್ತಾ: ಕಳೆದ ಕೆಲವು ದಿನಗಳಿಂದ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆಯುತ್ತಿರುವ ಪ್ರವಾದಿ ಪರವಾದ ಭಾರೀ ಹಿಂಸಾತ್ಮಕ ಪ್ರತಿಭಟನೆ, ಗಲಭೆಯ ಮಧ್ಯೆ ಕೋಮು ಸೌಹಾರ್ದತೆಯನ್ನು ಸಾರುವ ಘಟನೆಯೊಂದು ನಡೆದಿದೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉಲುಬೇರಿಯಾದಲ್ಲಿಅಸಹಾಯಕ ಮುಸ್ಲಿಂ ಕುಟುಂಬವೊಂದಕ್ಕೆ ಸ್ಥಳೀಯ ಹಿಂದೂಗಳು ನೆರವಾಗಿದ್ದಾರೆ.

ಗಲಭೆಗ್ರಸ್ಥ ಹೌರಾದಲ್ಲಿ ಭಾನುವಾರ ನಿಗದಿಯಾಗಿದ್ದ ಮುಸ್ಲಿಂ ವಿಧವೆಯ ಮಗಳ ಮದುವೆಯನ್ನು ಗಲಭೆಯ ಕಾರಣ ಮುಂದೂಡಬೇಕಾಗುತ್ತದೆ ಎಂಬ ಆತಂಕದಲ್ಲಿದ್ದ ಕುಟುಂಬಕ್ಕೆ ಸ್ಥಳೀಯ ಹಿಂದೂಗಳು ಸಹಾಯಕ್ಕೆ ಧಾವಿಸಿದ್ದಾರೆ. ನೆರೆಹೊರೆಯ ಹಿಂದೂಗಳು ಮುಸ್ಲಿಂ ವಿಧವೆಯ ಬೆಂಬಲಕ್ಕೆ ನಿಂತು ಅವರ ಮಗಳ ಮದುವೆಯನ್ನು ಮಾಡಿದ್ದಾರೆ. ಗಂಡನ ಮನೆಗೆ ವಧುವಿನ ಪ್ರಯಾಣದ ಸುರಕ್ಷತೆ ಸೇರಿದಂತೆ, ವರ ಮತ್ತು ಇತರ ಅತಿಥಿಗಳನ್ನು ಸ್ವಾಗತಿಸುವುದರಿಂದ ಹಿಡಿದು ಎಲ್ಲವನ್ನೂ ಹಿಂದೂಗಳೇ ಮಾಡಿಕೊಟ್ಟು ಗಲಭೆ ಎಬ್ಬಿಸಿದ್ದ ಮತಾಂಧರಿಗೆ ಮಾದರಿಯಾಗಿದ್ದಾರೆ.

ಮುಸ್ಲಿಂ ವಿಧವೆ ಇದ್ದೆನೆಸಾ ಮುಲ್ಲಿಕ್ ಹಾಗು ಅವರ ಮೂರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಹೌರಾ ಜಿಲ್ಲೆಯ ಎನ್ಎಚ್-6 ರ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆ ಬಳಿಯೇ ಗಲಭೆಕೋರರು ರಸ್ತೆ ತಡೆ ನಡೆಸಿ ದಾಂಧಲೆ ಎಬ್ಬಿಸಿದ್ದರು. ಪರಿಣಾಮ ಆ ಸ್ಥಳದಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿತ್ತು. “ಸೆಕ್ಷನ್ ಹಾಕಿದ ಕಾರಣ ಭಾನುವಾರ ನಿಗದಿಯಾಗಿದ್ದ ಮಗಳು ಪಾಕೀಜಾಳ ಮದುವೆ ಮುಂದೂಡುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ. ಆದರೆ ನನ್ನ ಹಿಂದೂ ನೆರೆಹೊರೆಯವರು ಮುಂದೆ ಬಂದು ಎಲ್ಲವನ್ನೂ ಅವರು ನೋಡಿಕೊಳ್ಳುವುದಾಗಿ ಭರವಸೆ ನೀಡಿದರು” ಎಂದು ಇದ್ದೆನೆಸಾ ಮುಲಿಕ್ ಅವರು ಅಭಾರಿ ಭಾವದಿಂದ ಹೇಳಿದ್ದಾರೆ.

ಸ್ಥಳೀಯ ಹಿಂದುಗಳಾದ ತಪಸ್ ಕೊಡಲಿ, ಲಖಿಕಾಂತ ಕಯಾಲ್ ಮತ್ತು ಉತ್ತಮ್ ಡೋಲುಯಿ ಅವರು ಮದುವೆಯ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ನಾವೆಲ್ಲ ಒಂದೇ ಹಳ್ಳಿಯಲ್ಲಿ ಬೆಳೆದಿದ್ದೇವೆ. ಪಾಕೀಜಾಳ ತಾಯಿ ಚಿಂತಾಕ್ರಾಂತರಾದಾಗ ನಾವು ಅವರಿಗೆ ಸಹಾಯ ಮಾಡಲು ನಿರ್ಧರಿಸಿದೆವು. ನಾವು ಮೂವರೂ ಪೊಲೀಸ್ ಠಾಣೆಗೆ ತೆರಳಿ ನಿಷೇಧಾಜ್ಞೆ ಜಾರಿ ಇದ್ದರೂ ಮದುವೆಗೆ ಅನುಮತಿ ಪಡೆದೆವು ಎಂದು ಕೊಡಲಿ ಅವರು ತಿಳಿಸಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version