National

ರಾಹುಲ್ ಗಾಂಧಿಗೆ ಎರಡನೇ ದಿನವೂ ಇಡಿ ಡ್ರಿಲ್: ಕಾಂಗ್ರೆಸ್ಸಿನಿಂದ ಮತ್ತೆ ಪ್ರತಿಭಟನೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸತತ ಎರಡನೇ ದಿನದ ವಿಚಾರಣೆಗಾಗಿ ನವದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ್ದಾರೆ. ನಿನ್ನೆ (ಸೋಮವಾರ) ರಾಹುಲ್ ಅವರನ್ನು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಇಡಿ ಇಂದಿಗೆ ವಿಚಾರಣೆ ಮುಂದೂಡಿತ್ತು. ಇಡಿ ಕಚೇರಿಗೆ ಹೋಗುವ ಮುನ್ನ ರಾಹುಲ್ ಅವರು ಪಕ್ಷದ ಸದಸ್ಯರ ಘೋಷಣೆಗಳ ನಡುವೆ ಸಹೋದರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ದೆಹಲಿಯ ಕಾಂಗ್ರೆಸ್ ಪಕ್ಷದ ಕಚೇರಿಗೆ ತಲುಪಿದರು. ಸೋಮವಾರ ದೆಹಲಿ ಪೊಲೀಸರಿಂದ ಹಲ್ಲೆಗೊಳಗಾದ ಕೆಸಿ ವೇಣುಗೋಪಾಲ್ ಸೇರಿದಂತೆ ಹಲವು ಹಿರಿಯ ನಾಯಕರು ಕೂಡ ಪಕ್ಷದ ಕಚೇರಿಯಲ್ಲಿ ಗಾಂಧಿ ಜೊತೆಗಿದ್ದರು.

ದೆಹಲಿಯ ಕಾಂಗ್ರೆಸ್‌ನ ಮುಖ್ಯ ಕಚೇರಿಯ ಸುತ್ತಲೂ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದ್ದಾರೆ. ಪಕ್ಷದ ಅಕ್ಬರ್ ರಸ್ತೆಯ ಕಚೇರಿಯತ್ತ ಸಾಗದಂತೆ ಹಲವಾರು ಬ್ಯಾರಿಕೇಡ್‌ಗಳನ್ನು ಕೂಡ ಹಾಕಲಾಗಿದೆ.

ನಿನ್ನೆಯ ದಿನ (ಸೋಮವಾರ) ಬೆಳಿಗ್ಗೆ 11 ಗಂಟೆಗೆ ವಿಚಾರಣೆ ಪ್ರಾರಂಭವಾಯಿತು ಮತ್ತು ಮೊದಲ ಸುತ್ತಿನ ವಿಚಾರಣೆ ಮಧ್ಯಾಹ್ನ 2.15 ರ ಸುಮಾರಿಗೆ ಊಟದ ವಿರಾಮ ನೀಡಲಾಯಿತು. ಮತ್ತೆ ಊಟದ ಬಳಿಕ ವಿಚಾರಣೆ ಆರಂಭವಾಗಿ ತಡ ರಾತ್ರಿ ತನಕ ಮುಂದುವರೆಯಿತು.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version