HomeNationalಕಾಶ್ಮೀರದಲ್ಲಿ ಅಲ್-ಬದ್ರ್ ಉಗ್ರ ಸಂಘಟನೆ ಭೇಧಿಸಿದ ಯೋಧರು: ನಾಲ್ವರು ಭಯೋತ್ಪಾದಕರು, ಮೂವರು ಸಹಚರರ ಬಂಧನ

ಕಾಶ್ಮೀರದಲ್ಲಿ ಅಲ್-ಬದ್ರ್ ಉಗ್ರ ಸಂಘಟನೆ ಭೇಧಿಸಿದ ಯೋಧರು: ನಾಲ್ವರು ಭಯೋತ್ಪಾದಕರು, ಮೂವರು ಸಹಚರರ ಬಂಧನ

ಜಮ್ಮು: ಶುಕ್ರವಾರ ತಡರಾತ್ರಿಯಿಂದ ಶನಿವಾರ ಬೆಳಗ್ಗೆವರೆಗೆ ಸೇನೆಯ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್‌ಗಳು, 92 ಸಿಆರ್‌ಪಿಎಫ್ ಬೆಟಾಲಿಯನ್, ಎಸ್‌ಒಜಿ ಚಿಜಾಮ ಮತ್ತು ಪಿಸಿ ರಫಿಯಾಬಾದ್‌ನ ಸೇರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಲ್-ಬದ್ರ್ ಭಯೋತ್ಪಾದನಾ ಸಂಘಟನೆಯನ್ನು ಭೇಧಿಸಲಾಗಿದೆ.

ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರು ಮತ್ತು ಅವರುಗಳ ಮೂವರು ಸಹಚರರನ್ನು ಬಂಧಿಸಲಾಗಿದೆ. ಜತೆಗೆ ಅವರ ನೆಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಸುಳಿವಿನ ಆಧಾರದ ಮೇಲೆ, ರಫಿಯಾಬಾದ್ ಪ್ರದೇಶದ ರಾವ್ಚಾ ಗ್ರಾಮದಲ್ಲಿ ಸರ್ಚ್ ಆಪರೇಷನ್ ಪ್ರಾರಂಭಿಸಲಾಯಿತು. ಬಂಧಿತ ಭಯೋತ್ಪಾದಕರನ್ನು ಅಲ್-ಬದ್ರ್ ತಂಝೀಮ್‌ನ ವಾರಿಶ್ ಅಹ್ಮದ್ ತಂತ್ರಾಯ್, ಅಮೀರ್ ಸುಲ್ತಾನ್ ವಾನಿ ಮತ್ತು ತಾರಿಕ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಅವರ ಬಳಿ ಇದ್ದ ಸ್ಪೋಟಕ ಸಾಮಗ್ರಿಗಳು ಹಾಗೂ 2 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬಳಿಕ ಹಂದ್ವಾರದ ಮಾವಾರ್‌ನಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಮೂವರು ಸಹಚರರನ್ನು ಬಂಧಿಸಲಾಗಿದೆ. ಅವರನ್ನು ಮೊಹಮ್ಮದ್ ಅಶ್ರಫ್ ಮಲಿಕ್, ಮೊಹಮ್ಮದ್ ಅಫ್ಜಲ್ ಥೋಕರ್ ಮತ್ತು ಶಬೀರ್ ಅಹ್ಮದ್ ಶಾ ಎಂದು ಗುರುತಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments