National

ಭಾರತದ ಕೋವ್ಯಾಕ್ಸಿನ್ 77.8% ರಷ್ಟು ಪರಿಣಾಮಕಾರಿ – ಲ್ಯಾನ್ಸೆಟ್ ವರದಿ

ನವದೆಹಲಿ: ಭಾರತದಲ್ಲಿಯೇ ತಯಾರಿಸಿರುವ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಫಲಿತಾಂಶ ಜಗತ್ತಿನ ಪ್ರಸಿದ್ಧವಾದ ನಿಯತಕಾಲಿಕ ಲಾನ್ಸೆಟ್ ನಲ್ಲಿ ಪ್ರಕಟಗೊಂಡಿದೆ. ಮೂರನೆಯ ಹಂತದ ಪ್ರಯೋಗದಲ್ಲಿ ಲಕ್ಷಣ ಸಹಿತವಾದ ಕೋವಿಡ್ ವಿರುದ್ಧ ಕೋವಾಕ್ಸಿನ್ ಲಸಿಕೆಯು 77.8% ನಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ.

ಇದು ಡೆಲ್ಟಾ ತಳಿಯ ವಿರುದ್ಧವೂ ಶೇಕಡಾ 65% ರಷ್ಟು ಪರಿಣಾಮಕಾರಿ ಎಂದೆನಿಸಿದೆ ಎಂದು ಲ್ಯಾನ್ಸೆಟ್ ವರದಿ ಮಾಡಿದೆ. ತೀವ್ರತರನಾದ ಕೋವಿಡ್ ಸೋಂಕಿನ ವಿರುದ್ಧ ಇದು 93% ರಷ್ಟು ರಕ್ಷಣೆಯನ್ನು ಒದಗಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಮೂಲಕ ಭಾರತೀಯ ಮೂಲದ ಲಸಿಕೆ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಕೋವ್ಯಾಕ್ಸಿನ್ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ, ಐಸಿಎಂಆರ್ ಹಾಗೂ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಇವುಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಿತ್ತು.

Exit mobile version