National

ಅಫ್ಘಾನ್ ಬೆಳವಣಿಗೆ: ಭಾರತದ ವಿದೇಶಾಂಗ ಸಚಿವರಿಂದ ಕತಾರ್ ವಿದೇಶಾಂಗ ಸಚಿವರ ಭೇಟಿ

ದೋಹಾ: ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರು ಇಂದು (ಶುಕ್ರವಾರ) ದೋಹಾ ಭೇಟಿ ವೇಳೆ ಕತಾರ್ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರೆಹ್ಮಾನ್ ಅಲ್ ಥಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಫ್ಘಾನ್ ತಾಲಿಬಾನ್ ವಶವಾದ ಬೆನ್ನಲ್ಲೇ ನಡೆದ ಈ ಮಾತುಕತೆ ಪ್ರಾಮುಖ್ಯತೆ ಪಡೆದಿದೆ.

ಸಚಿವ ಜೈಶಂಕರ್ ನ್ಯೂಯಾರ್ಕ್ ನಿಂದ ಭಾರತಕ್ಕೆ ವಾಪಸಾಗುವ ವೇಳೆ ಮಾರ್ಗಮಧ್ಯೆ ದೊಹಾದಲ್ಲಿ ನಿಲುಗಡೆಯಾಗಿದ್ದರು. ಈ ಸಂದರ್ಭ ಕತಾರ್ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ಅಫ್ಘಾನಿಸ್ತಾನದ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಭೇಟಿ ಬಗ್ಗೆ ಟ್ವಿಟ್ಟರಿನಲ್ಲಿ ಪ್ರಕಟಿಸಿರುವ ಜೈ ಶಂಕರ್, ಭೇಟಿ ವೇಳೆ ಅಫ್ಘಾನ್ ಕುರಿತಾಗಿ ಚರ್ಚಿಸಿದೆವು ಎಂದು ಬರೆದುಕೊಂಡಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳಲು ಜೈಶಂಕರ್ ನ್ಯೂಯಾರ್ಕ್’ಗೆ ತೆರಳಿದ್ದರು. ಭಾರತ ಈ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿತ್ತು.

Exit mobile version