
ನವದೆಹಲಿ: ಚೀನಾ ಜತೆಗಿನ ಗಡಿ ಖ್ಯಾತೆ ಹಾಗು ಇತ್ತೀಚಿನ ಚೀನಾ ತಂಟೆಗಳ ನಂತರ ಭಾರತ ಉಭಯ ದೇಶಗಳ ಗಡಿ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುತ್ತಿದೆ. ಅರುಣಾಚಲ ಪ್ರದೇಶದ ಭಾರತ ಚೀನಾ ಗಡಿ ಮೂಲ ಸೌಕರ್ಯ ಅಭಿವೃದ್ಧಿಗೆ ೬ ಪಟ್ಟು ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶ ರಾಜ್ಯದಲ್ಲಿ ಬರುವ ಉಭಾ ದೇಶಗಳ ಗಡಿ ಪ್ರದೇಶದ ಅಭಿವೃದ್ಧಿಗೆ ೨೦೨೦-೨೧ ನೇ ಸಾಲಿನಲ್ಲಿ ೪೨.೮೭ ಕೋತಿ ಬಿಡುಗಡೆ ಮಾಡಿದ್ದರೆ, ೨೦೨೧-೨೨ ನೇ ಸಾಲಿನಲ್ಲಿ ೨೪೯.೧೩ ಕೋಟಿ ಅನುದಾನ ಮಂಜೂರಾಗಿದೆ ಎಂದು ಸಚಿವರು ಹೇಳಿದ್ದಾರೆ.
ಚೀನಾ, ಬಾಂಗ್ಲಾ, ಮಯನ್ಮಾರ್ ಗಡಿ ಪ್ರದೇಶಗಳ ಅಭಿವೃದ್ಧಿಗೆ ೨೦೨೧-೨೨ ಸಾಲಿನಲ್ಲಿ ಒಟ್ಟು ೬೦೩ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ರಕ್ಷಣಾ ಕ್ಷೇತ್ರಕ್ಕೆ ಹಾಗು ಹಾಗು ರಕ್ಷಣಾ ಕಾರ್ಯಗಳಿಗೆ ಅನುಕೂಲವಾಗುವಂತಹ ಗಡಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಸತತ ವರ್ಷಗಳಿಂದ ಹೆಚ್ಚು ಒತ್ತು ನೀಡುತ್ತಿದೆ.












































