HomeNationalಪ್ರವಾದಿ ಬಗ್ಗೆ ಹೇಳಿಕೆಗೆ ಅರಬ್ ರಾಷ್ಟ್ರಗಳ ಪ್ರತಿಭಟನೆ ಹಿಂದೆ ಪಾಕ್ ಕೈವಾಡ ಶಂಕೆ: ಗುಪ್ತಚರ ಇಲಾಖೆ

ಪ್ರವಾದಿ ಬಗ್ಗೆ ಹೇಳಿಕೆಗೆ ಅರಬ್ ರಾಷ್ಟ್ರಗಳ ಪ್ರತಿಭಟನೆ ಹಿಂದೆ ಪಾಕ್ ಕೈವಾಡ ಶಂಕೆ: ಗುಪ್ತಚರ ಇಲಾಖೆ

ನವದೆಹಲಿ: ಪ್ರವಾದಿ ಬಗ್ಗೆ ಬಿಜೆಪಿ ದೆಹಲಿ ವಕ್ತಾರೆ ನೀಡಿದ್ದ ಹೇಳಿಕೆಗೆ ಭಾರತ ಸರ್ಕಾರ ಸ್ಪಷ್ಟನೆ ನೀಡಿದ್ದರೂ, ಆ ವಕ್ತಾರೆಯನ್ನು ಪಕ್ಷದಿಂದ ಅಮಾನತು ಮಾಡಿದ್ದರೂ ಅರಬ್ ಇಸ್ಲಾಮಿಕ್ ರಾಷ್ಟ್ರಗಳ ಪ್ರತಿಭಟನೆ ಮುಂದುವರೆದಿದೆ. ಈ ಮಧ್ಯೆ ಭಾರತೀಯ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಅರಬ್ ರಾಷ್ಟ್ರಗಳ ಈ ಟೂಲ್ ಕಿಟ್ ಹಿಂದೆ ಪಾಕಿಸ್ತಾನದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಅರಬ್ ರಾಷ್ಟ್ರಗಳು ಸೇರಿ ಒಟ್ಟು 15 ರಾಷ್ಟ್ರಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಬೆದರಿದ ಆಡಳಿತಾರೂಢ ಬಿಜೆಪಿ ಪಕ್ಷ ತನ್ನ ಸದಸ್ಯರಿಗೆ “ಯಾವುದೇ ಧರ್ಮದ ಬಗ್ಗೆಯೂ ಮಾತನಾಡಬಾರದು” ಎಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ರವಾನಿಸಿದೆ.

ಮುಸ್ಲಿಮ್ ರಾಷ್ಟ್ರಗಳಿಂದ ವ್ಯಕ್ತವಾಗುತ್ತಿರುವ ಪ್ರತಿಭಟನೆ ಹಾಗು ಭಾರತ ವಿರೋಧಿ ಹ್ಯಾಷ್ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಗುಪ್ತಚರ ದಳ ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಟ್ವಿಟ್ಟರಿನಲ್ಲಿ ಭಾರತ ವಿರೋಧಿ ಹ್ಯಾಷ್ ಟ್ಯಾಗ್ ಗಾಗಿ 750 ಬೋಟ್ ಖಾತೆಗಳನ್ನು ಬಳಸಲಾಗಿದ್ದು ಈ ಖಾತೆಗಳು ಪಾಕಿಸ್ತಾನದ ಪಿಟಿಐ ಪಕ್ಷದ ಬೆಂಬಲ ಹೊಂದಿರುವ ಬಗ್ಗೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments