National

ಇಸ್ರೇಲ್ ಪ್ರಧಾನಿಗೆ ಕೊರೋನಾ ಪಾಸಿಟಿವ್: ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ ರದ್ದು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗು ಇಸ್ರೇಲ್ ಪ್ರಧಾನಿ ಜತೆಯಾಗಿ ಏಪ್ರಿಲ್ 5ರಂದು ಕರ್ನಾಟಕ ಪ್ರವಾಸ ಕೈಗೊಳ್ಳುವರಿದ್ದರು. ಇದೀಗ ಇಸ್ರೇಲ್ ಪ್ರಧಾನಿಗೆ ಕೋವಿಡ್ ಕಾಣಿಸಿರುವ ಕಾರಣ ದಿಢೀರ್ ಪ್ರವಾಸ ರದ್ದಾಗಿದೆ.

ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಲೋಕಾರ್ಪಣೆ, ಮೇಲ್ದರ್ಜೆಗೇರಿಸಿದ 150 ಐಟಿಐ ಉದ್ಘಾಟನೆ ಕಾರ್ಯಕ್ರಮ, ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವವರಿದ್ದರು.

ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಗೆ ಕೋವಿಡ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸ ರದ್ದು ಮಾಡಲಾಗಿದೆ. ಏಪ್ರಿಲ್ 5ರಂದು ಮೂರು ಕಾರ್ಯಕ್ರಮಗಳ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಜೊತೆ ಕರ್ನಾಟಕ್ಕೆ ಆಗಮಿಸುವವರಿದ್ದರು. ಇದೀಗ ನಫ್ತಾಲಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಕೊರೋನಾ ಕಾರಣ ಅವರ ಭಾರತ ಪ್ರವಾಸ ರದ್ದುಗೊಂಡಿದೆ.

Exit mobile version