HomeNationalಕಾಶ್ಮೀರದ ಕುಲ್ಗಾಮ್‌ನಲ್ಲಿ ಹಿಂದೂ ಶಿಕ್ಷಕರ ಹತ್ಯೆ ಮಾಡಿದ್ದ ಭಯೋತ್ಪಾದಕರನ್ನು ಹೊಡೆದುರುಳಿಸಿದ ಪೊಲೀಸರು

ಕಾಶ್ಮೀರದ ಕುಲ್ಗಾಮ್‌ನಲ್ಲಿ ಹಿಂದೂ ಶಿಕ್ಷಕರ ಹತ್ಯೆ ಮಾಡಿದ್ದ ಭಯೋತ್ಪಾದಕರನ್ನು ಹೊಡೆದುರುಳಿಸಿದ ಪೊಲೀಸರು

ಕುಲ್ಗಮ್/ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಇಸ್ಲಾಂ ಭಯೋತ್ಪಾದಕರು ಇತ್ತೀಚಿಗೆ ಕಣಿವೆಯಲ್ಲಿ ನಡೆದ ಹಿಂದೂ ಕಾಶ್ಮೀರಿ ಪಂಡಿತ್ ಸಮುದಾಯದ ಸರ್ಕಾರಿ ಶಾಲೆಯ ಶಿಕ್ಷಕಿ ರಜಿನಿ ಬಾಲಾ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಮಂಗಳವಾರ ಕುಲ್ಗಾಮ್‌ನ ಮಿಶಿಪೋರಾ ಪ್ರದೇಶದಲ್ಲಿ ಎನ್‌ಕೌಂಟರ್ ಕಾರ್ಯಾಚರಣೆ ಆರಂಭವಾಗಿ, ರಾತ್ರಿ ಸ್ಥಗಿತಗೊಂಡಿತ್ತು. ಮತ್ತೆ ಬುಧವಾರ ಬೆಳಗ್ಗೆ ಪುನರಾರಂಭವಾಗಿತ್ತು. ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿಯ ಬಳಿಕ ಭಯೋತ್ಪಾದಕರು ಮಿಶಿಪೋರಾದ ಪ್ರದೇಶದೊಳಗೆ ಸ್ಥಳಾಂತರಗೊಳ್ಳುವಲ್ಲಿ ಯಶಸ್ವಿಯಾದರು. ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ ಭದ್ರತಾ ಪಡೆಗಳು ಇಂದು ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಈ ಇಬ್ಬರು ಭಯೋತ್ಪಾದಕರನ್ನು ಹೊಡೆದುರಳಿಸಿದರು.

ಕುಲ್ಗಾಮ್‌ನ ಗೋಪಾಲ್‌ಪೋರಾ ಪ್ರದೇಶದ ಹಿಂದೂ ಕಾಶ್ಮೀರಿ ಪಂಡಿತ ಸಮುದಾಯದ ಶಿಕ್ಷಕಿ ರಜಿನಿ ಬಾಲಾ ಅವರನ್ನು ಮೇ 31 ರಂದು ಗೋಪಾಲ್‌ಪೋರಾದ ಸರ್ಕಾರಿ ಪ್ರೌಢಶಾಲೆಯ ಹೊರಗೆ ಮುಸ್ಲಿಂ ಉಗ್ರರು ಗುಂಡಿಕ್ಕಿ ಕೊಂಡಿದ್ದರು. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸುತ್ತಿರುವ ಉದ್ದೇಶಿತ ಟಾರ್ಗೆಟ್ ಹತ್ಯೆಗಳ ಸರಣಿಯ ಭಾಗವಾಗಿತ್ತು. ದೇಶದಾದ್ಯಂತ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂದೂ ಧರ್ಮೀಯರ ಸರಣಿ ಕೊಲೆಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments