
ಬಾರಾಮುಲ್ಲಾ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಬಾಲಾ ಪ್ರದೇಶದ ವಾನಿಗಮ್ ನಲ್ಲಿ ನಡೆದ ಉಗ್ರರ ವಿರುದ್ಧದ ಎನ್ ಕೌಂಟರ್ ನಲ್ಲಿ ಇಂದು ಶನಿವಾರ ಓರ್ವ ಜಿಹಾದಿ ಉಗ್ರನನ್ನು ಹೊಡೆದುರುಳಿಸಲಾಗಿದೆ. ಸ್ಥಳದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮತ್ತಷ್ಟು ಉಗ್ರರಿಗಾಗಿ ಶೋಧ ನಡೆಯುತ್ತಿದೆ.
ಈಗ ಬಂದಿರುವ ಮಾಹಿತಿಯಂತೆ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತನಾಗಿದ್ದು ಶೋಧ ಕಾರ್ಯ ಮುಂದುವರಿದಿದೆ. ಉಗ್ರರ ಇರುವಿಕೆ ಬಗ್ಗೆ ಇಂಟೆಲಿಜೆನ್ಸ್ ಮಾಹಿತಿ ಬಂದ ಬಳಿಕ ಭದ್ರತಾ ಪಡೆ ಆ ಪ್ರದೇಶವನ್ನು ಸುತ್ತುವರಿದು ಎನ್ಕೌಂಟರ್ ಆರಂಭಿಸಿದವು.












































