National

ಕಾಬೂಲ್ ಧಾಳಿಗೆ ಅಮೇರಿಕ ಪ್ರತಿಕಾರ: ಏರ್ ಸ್ಟ್ರೈಕ್ ಮೂಲಕ ಬಾಂಬ್ ಪ್ಲಾನರ್ ಹತ್ಯೆ

ಕಾಬೂಲ್: ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಆತ್ಮಾಹುತಿ ಬಾಂಬ್ ಧಾಳಿ ನಡೆಸಿ 13 ಮಂದಿ ಅಮೇರಿಕ ಸೈನಿಕರು ಹಾಗು 160ಕ್ಕೂ ಅಧಿಕ ಪ್ರಜೆಗಳ ಸಾವಿಗೆ ಪ್ರತೀಕಾರ ತೆಗೆದುಕೊಂಡಿದ್ದೇವೆ ಎಂದು ಅಮೇರಿಕ ಹೇಳಿಕೊಂಡಿದೆ.

ಅಮರಿಕದ ಸೆಂಟ್ರಲ್ ಕಮಾಂಡ್ ನ ವಕ್ತಾರ ಹೇಳಿಕೆಯ ಪ್ರಕಾರ ನಂಗಹಾರ್ ಪ್ರಾಂತ್ಯದಲ್ಲಿ ಡ್ರೋನ್ ಮೂಲಕ ಟಾರ್ಗೆಟ್ ಮೇಲೆ ಧಾಳಿ ಮಾಡಲಾಗಿದೆ. ಹಾಗು ಟಾರ್ಗೆಟ್ ಅನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಾಬೂಲ್ ಧಾಳಿಯ 36 ಗಂಟೆಯ ಒಳಗೆ ಅಮೇರಿಕ ಪ್ರತಿ ಧಾಳಿ ನಡೆಸಿದೆ.

ಕಾಬೂಲ್ ಮೇಲಿನ ಧಾಳಿಗೆ ಐಸಿಸ್-ಖೋರಸಾನ್ ಉಗ್ರ ಸಂಘಟನೆ ಜವಾಬ್ದಾರಿ ಹೊತ್ತುಕೊಂಡಿತ್ತು. ಈ ಬೆನ್ನಲ್ಲೇ ಅಮೇರಿಕ ಅಧ್ಯಕ್ಷ ಜೋ ಬಿಡೆನ್ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ನೀವು ಎಚ್ಚರಿಕೆಯಿಂದ ಇರಿ, ನಿಮ್ಮನ್ನು ನಾವು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಎಲ್ಲೇ ಅಡಗಿ ಕೂತಿದ್ದರೂ ಹುಡುಕಿ ಹೊಸಕಿ ಹಾಕುತ್ತೇವೆ ಎಂದು ಬಿಡೆನ್ ಹೇಳಿದ್ದರು.

ಬಿಡೆನ್ ಹೇಳಿಕೆಯ ಕೆಲವೇ ಘಂಟೆಗಳಲ್ಲಿ ಟಾರ್ಗೆಟ್ ಮೇಲೆ ಧಾಳಿ ಮಾಡಿ ಬಾಂಬ್ ಪ್ಲಾನರ್ ಉಗ್ರನನ್ನು ಹತ್ಯೆ ಮಾಡಲಾಗಿದೆ.

Exit mobile version