National

ಪ್ರವಾದಿ ಹೇಳಿಕೆ ಗಲಭೆ: ಕಾನ್ಪುರದ ಬೀದಿಗಳಲ್ಲಿ ಬುಲ್ಡೋಜರ್‌ ಕಾರ್ಯಾಚರಣೆ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರವಾದಿ ಹೇಳಿಕೆಗೆ ಸಂಬಂಧಿಸಿದಂತೆ ಹಿಂಸಾಚಾರ ಭುಗಿಲೆದ್ದ ಒಂದು ವಾರದ ನಂತರ, ನಗರದ ಬೀದಿಗಳಲ್ಲಿ ಬುಲ್ಡೋಜರ್‌ಗಳು ಸದ್ದು ಮಾಡಿವೆ. ಗಲಭೆಯ ದುಷ್ಕರ್ಮಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗಿದೆ.

ಹಿಂಸಾಚಾರದ ಪ್ರಮುಖ ಆರೋಪಿ ಸ್ಥಳೀಯ ಮುಸ್ಲಿಂ ಮುಖಂಡ ಜಾಫರ್ ಹಯಾತ್ ಹಶ್ಮಿ ಎಂದು ಗುರುತಿಸಲಾಗಿದ್ದು ಆತನ ನಿವಾಸದ ಮೇಲೆ ಬುಲ್ಡೋಜರ್‌ಗಳು ಧಾಳಿ ಮಾಡಿವೆ. ರಸ್ತೆಗೆ ತಾಗಿ ಅಕ್ರಮವಾಗಿದ್ದ ಜಾಫರ್ ಹಯಾತ್ ಹಶ್ಮಿ ನಿವಾಸದ ಬಾಗಿಲನ್ನು ಕೆಡವಲಾಗಿದೆ.

ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಹೇಳಿಕೆ ಬಳಿಕ ಜೂನ್ 3 ರಂದು ಕಾನ್ಪುರದಲ್ಲಿ ಹಿಂಸಾತ್ಮಕ ಘರ್ಷಣೆಗಳು ಮತ್ತು ಕಲ್ಲು ತೂರಾಟಗಳು ನಡೆದವು. ಮುಸ್ಲಿಂ ಸಂಘಟನೆಯೊಂದು ನಗರದ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಪರೇಡ್ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಮುಚ್ಚಲು ಕರೆ ನೀಡಿತ್ತು. ಆ ಸಂದರ್ಭ ಇತರೆ ಸಮುದಾಯದ ಜನರ ಮಧ್ಯೆ ಘರ್ಷಣೆ ಉಂಟಾಗಿ ಮುಸ್ಲಿಂ ಮತಾಂಧರು ಕಲ್ಲು ತೂರಾಟ ಹಾಗು ಹಿಂಸಾತ್ಮಕ ಕಾರ್ಯಕ್ಕೆ ಇಳಿದರು.

ಡಿಸಿಪಿ ಸಂಜೀವ್ ತ್ಯಾಗಿ ನೇತೃತ್ವದ ಎಂಟು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಬಗ್ಗೆ ತನಿಖೆ ನಡೆಸುತ್ತಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version