Karnataka

ಬಿಎಂಟಿಸಿ ಬೆಂಗಳೂರು: ಮುಸ್ಲಿಂ ಸಿಬ್ಬಂದಿ ಟೋಫಿ ಧರಿಸುವುದನ್ನು ವಿರೋಧಿಸಿ ಹಿಂದೂ ಸಿಬ್ಬಂದಿಯಿಂದ ಕೇಸರಿ ಶಾಲು ಧರಿಸಿ ಪ್ರತಿಭಟನೆ

ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ಹಿಜಾಬ್ ವಿವಾದ ಸಂದರ್ಭ ತರಗತಿಯೊಳಗೆ ಹಿಜಾಬ್ ಧರಿಸುವುದನ್ನು ವಿರೋಧಿಸಿ ಉಳಿದ ವಿದ್ಯಾರ್ಥಿಗಳು ಕೆಸರು ಶಾಲು ಧರಿಸಿ ಪ್ರತಿಭಟಿಸಿದಂತೆ ಇದೀಗ ಅಂತಹುದೇ ಪ್ರತಿಭಟನೆ ಬೆಂಗಳೂರು ನಗರ ಸಾರಿಗೆ ಸಂಸ್ಥೆ ಬಿಎಂಟಿಸಿಯಲ್ಲಿ ವ್ಯಕ್ತವಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ(ಬಿಎಂಟಿಸಿ) ಮುಸ್ಲಿಂ ಸಿಬ್ಬಂದಿ ಟೋಪಿ ಧರಿಸುವುದನ್ನು ವಿರೋಧಿಸಿ ಬಿಎಂಟಿಸಿಯ ಕೆಲವು ಹಿಂದೂ ಸಿಬ್ಬಂದಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯ ಸರ್ಕಾರಿ ಸ್ವಾಮ್ಯದ ಬಿಎಂಟಿಸಿಯ ಕೆಲವು ಮುಸ್ಲಿಂ ಚಾಲಕರು, ಕಂಡಕ್ಟರ್‌ಗಳು ಮತ್ತು ಇತರ ನೌಕರರು ಮುಸ್ಲಿಂ ಧಾರ್ಮಿಕ ಸಂಕೇತದ ಸ್ಕಲ್ ಟೋಪಿ ಧರಿಸಿರುವುದನ್ನು ವಿರೋಧಿಸಿ ಈಗ ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಈ ಮೂಲಕ ಸಂಸ್ಥೆಯಲ್ಲಿ ಸಮವಸ್ತ್ರದ ಹೊರತಾಗಿ ಧಾರ್ಮಿಕ ಉಡುಗೆ ತೊಡುವುದನ್ನು ಖಡಕ್ಕಾಗಿ ವಿರೋಧಿಸುತ್ತಿದ್ದಾರೆ ಮತ್ತು ಮತಾಂಧರಿಗೆ ತಕ್ಕ ಸಂದೇಶ ರವಾನಿಸಿದ್ದಾರೆ.

ಬಿಎಂಟಿಸಿ ನಿಗದಿಪಡಿಸಿದ ಸಮವಸ್ತ್ರದ ನಿಯಮಗಳನ್ನು ಉಲ್ಲಂಘಿಸುವಂತಿದ್ದರೂ ಕೆಲಸದ ಸಮಯದಲ್ಲಿ ತಲೆಗೆ ಧರಿಸಿರುವ ಟೋಪಿಯನ್ನು ತೆಗೆದುಹಾಕಲು ಮುಸ್ಲಿಂ ನೌಕರರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಿಎಂಟಿಸಿಯಲ್ಲಿ ಏಕರೂಪದ ನಿಯಮಗಳನ್ನು ಜಾರಿಗೆ ತರಲು ಮತ್ತು ಮುಸ್ಲಿಂ ಟೋಪಿ ಧರಿಸುವುದನ್ನು ತಪ್ಪಿಸುವ ಸಲುವಾಗಿ ಬಿಎಂಟಿಸಿ ಹಿಂದೂ ಉದ್ಯೋಗಿಗಳು “ಕೇಸರಿ ಕಾರ್ಮಿಕರ ಸಂಘ” ಎಂಬ ಸಂಘ ಕಟ್ಟಿಕೊಂಡು ಕೇಸರಿ ಶಾಲು ಧರಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.ಈಗಾಗಲೇ ಸುಮಾರು 1,500 ನೌಕರರು ಈ ಸಂಘದಲ್ಲಿ ನೋಂದಾಯಿಸಿಕೊಂಡಿದ್ದಾರೆ.

”ಬಿಎಂಟಿಸಿಯಲ್ಲಿ ಪೊಲೀಸ್ ಇಲಾಖೆಯ ರೀತಿ ಸಮಾನವಾದ ಯೂನಿಫಾರ್ಮ್ ಕೋಡ್ ಇದೆ. ಇಷ್ಟು ದಿನ ನೌಕರರು ಹೇಗೆ ಏಕರೂಪದ ನಿಯಮಗಳನ್ನು ಪಾಲಿಸುತ್ತಿದ್ದರು ಅದೇ ರೀತಿ ಶಿಸ್ತು ಪಾಲಿಸಬೇಕು. ಇದರಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್ ಅವರು ಧಾರ್ಮಿಕ ಉಡುಗೆ ಧರಿಸಿ ಕಿರಿಕ್ ಮಾಡುತ್ತಿರುವ ಮತಾಂಧ ಮುಸ್ಲಿಂ ನೌಕರರಿಗೆ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version