HomeNationalದಿ ಕೇರಳ ಸ್ಟೋರಿ ಸಿನೆಮಾ ನೈಜ್ಯ ಕಥಾನಕ: ಇಸ್ಲಾಂಗೆ ಮತಾಂತರಗೊಳ್ಳಲು ನನ್ನ ಬ್ರೈನ್‌ವಾಶ್ ಮಾಡಲಾಗಿತ್ತು ಎಂದ...

ದಿ ಕೇರಳ ಸ್ಟೋರಿ ಸಿನೆಮಾ ನೈಜ್ಯ ಕಥಾನಕ: ಇಸ್ಲಾಂಗೆ ಮತಾಂತರಗೊಳ್ಳಲು ನನ್ನ ಬ್ರೈನ್‌ವಾಶ್ ಮಾಡಲಾಗಿತ್ತು ಎಂದ ಸಂತ್ರಸ್ತ ಮಹಿಳೆ

ದಿ ಕೇರಳ ಸ್ಟೋರಿ. ಇದು ಇಂದು ಇಡೀ ರಾಷ್ಟ್ರದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಚಲನಚಿತ್ರಗಳಲ್ಲಿ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕಾರಣಿಗಳಿಂದ ಹಿಡಿದು ಜನಸಾಮಾನ್ಯರವರೆಗೂ ಎಲ್ಲರೂ ಈ ಚಿತ್ರವು ಸ್ಪಷ್ಟವಾಗಿ ಇಸ್ಲಾಂಗೆ ಮತಾಂತರಗೊಂಡ ಹಿಂದೂ ಮಹಿಳೆಯರ ನೈಜ ಕಥೆಯನ್ನು ಆಧರಿಸಿದೆ ಮತ್ತು ನಂತರ ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಬ್ರೈನ್‌ವಾಶ್ ಮಾಡಲ್ಪಟ್ಟಿದೆ ಎಂದು ಹೇಳುತ್ತಿದ್ದಾರೆ.

ಸಿನಿಮಾಗಳ ಬಗ್ಗೆ ಅನಗತ್ಯವಾಗಿ ಕಾಮೆಂಟ್ ಮಾಡದಂತೆ ಬಿಜೆಪಿ ಸದಸ್ಯರಿಗೆ ಈ ಹಿಂದೆ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಈ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಈ ಸಿನೆಮಾ ಭಯೋತ್ಪಾದನೆಯ ಕೊಳಕು ಸತ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಆದರೆ ಕೇರಳ ಮುಖ್ಯಮಂತ್ರಿ ಆದಿಯಾಗಿ ಅಲ್ಲಿನ ಕಮ್ಯುನಿಷ್ಟ್ ಹಾಗು ಕಾಂಗ್ರೆಸ್ ನಾಯಕರುಗಳು ಇದೊಂದು ಅಜೆಂಡಾ ಸಿನೆಮಾ ಎನ್ನುತ್ತಿದ್ದಾರೆ.

ಇದೆಲ್ಲದರ ನಡುವೆ ಸಿನಿಮಾ ತನ್ನ ನಿಜ ಜೀವನದ ಕಥೆಯನ್ನು ತೋರಿಸುತ್ತದೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಕಾಸರಗೋಡಿನ ಶೃತಿ ಅವರು ಸಿನಿಮಾವನ್ನು ಸತ್ಯವಾದ ಕಥಾನಕ ಎಂದು ಕರೆಯಿದ್ದಾರೆ. ಕಾಲೇಜಿನಲ್ಲಿ ಮುಸ್ಲಿಂ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ ಇಸ್ಲಾಂಗೆ ಮತಾಂತರಗೊಂಡ ಸಂತ್ರಸ್ತರಲ್ಲಿ ನಾನೂ ಒಬ್ಬಳು ಎಂದು ಹೇಳಿಕೊಂಡಿದ್ದಾಳೆ.

ಹಿಂದಿ ಸುದ್ದಿ ಸಂಸ್ಥೆ ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶ್ರುತಿ, ತನ್ನ ಕಾಲೇಜು ಸ್ನೇಹಿತರಾಗಿದ್ದ ಮುಸ್ಲಿಂ ಹುಡುಗಿಯರಿಂದ ಇಸ್ಲಾಂಗೆ ಮತಾಂತರಗೊಳ್ಳಲು ಬ್ರೈನ್‌ವಾಶ್ ಮಾಡಲಾಗಿದೆ ಎಂದು ಬಹಿರಂಗಪಡಿಸಿದರು. ಮತಾಂತರದ ಬಳಿಕ ಶ್ರುತಿ ತನ್ನ ಹೆಸರನ್ನು ರಹಮತ್ ಎಂದು ಬದಲಾಯಿಸಿದ್ದಳು.

ಮುಸ್ಲಿಂ ಸ್ನೇಹಿತೆಯರು ತಮ್ಮ ಮೇಲೆ ಪ್ರಭಾವ ಬೀರುತ್ತಾರೆ, ಹಿಂದೂ ಧರ್ಮ ಮತ್ತು ಹಿಂದೂ ಹಬ್ಬಗಳನ್ನು ಅಪಹಾಸ್ಯ ಮಾಡುತ್ತಾರೆ. ಅವರು ಹಾಕುವ ಮುಸುಕು ಹುಡುಗಿಯರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ ಎಂದು ನಂಬಿಸುತ್ತಾರೆ. ಅವರು ತಮ್ಮ ಮತಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಇಸ್ಲಾಂ ಮಾತ್ರ ನಿಜವಾದ ಸಿದ್ಧಾಂತವೆಂದು ನಂಬುತ್ತಾರೆ ಎಂದು ಶ್ರತಿ ಹೇಳಿದರು.

ಸ್ಟೋರಿ ಆಫ್ ಎ ರಿವರ್ಶನ್: ಹೌ ಐ ಕನ್ವರ್ಟ್ ಆ್ಯಂಡ್ ರಿಟರ್ನ್ಡ್ ಟು ಸನಾತನ ಧರ್ಮ ಎಂಬ ಆತ್ಮಕತೆ ಬರೆದಿರುವ ಶ್ರುತಿ ಅವರು “ನಾನು ಮುಸ್ಲಿಂ ಆದ ನಂತರ ನಾನು ನೋಡಿದ ಅನೇಕ ವಿಷಯಗಳನ್ನು ಯೋಚಿಸಲು ನಾನು ಇನ್ನೂ ನಡುಗುತ್ತೇನೆ. ಕಲಿಮಾದ ಮತಾಂತರ ಕೇಂದ್ರಕ್ಕೆ ಮತಾಂತರಕ್ಕೆ ಬಂದಿದ್ದವರಲ್ಲಿ ಸುಮಾರು 65 ಮಹಿಳೆಯರು ಇದ್ದರು, ಅದರಲ್ಲಿ ವಯಸ್ಸಾದ ಮಹಿಳೆಯರು, ತುಂಬು ಗರ್ಭಿಣಿಯರು, 16-17 ವರ್ಷ ವಯಸ್ಸಿನ ಹುಡುಗಿಯರು ಮತ್ತು ಹೆಣ್ಣುಮಕ್ಕಳಿರುವ ಮಹಿಳೆಯರೂ ಸೇರಿದ್ದರು ಎಂದು ಈ ಹಿಂದೆ ಹೇಳಿಕೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments