HomeNationalಭಾರತದ ಹೊಸ ಸೇನಾ ಮುಖ್ಯಸ್ಥರಾಗಿ ಮನೋಜ್ ಪಾಂಡೆ ನೇಮಕ: ಸೇನಾ ಉನ್ನತ ಹುದ್ದೆ ಅಲಂಕರಿಸಿದ ಮೊದಲ...

ಭಾರತದ ಹೊಸ ಸೇನಾ ಮುಖ್ಯಸ್ಥರಾಗಿ ಮನೋಜ್ ಪಾಂಡೆ ನೇಮಕ: ಸೇನಾ ಉನ್ನತ ಹುದ್ದೆ ಅಲಂಕರಿಸಿದ ಮೊದಲ ಇಂಜಿನಿಯರ್

ನವದೆಹಲಿ: ಭಾರತೀಯ ಸೇನೆಯ ವೈಸ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರನ್ನು ಸೋಮವಾರ ಭಾರತೀಯ ಸೇನೆಯ ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪಾಂಡೆ ಅವರು ಉನ್ನತ ಮಿಲಿಟರಿ ಹುದ್ದೆಯನ್ನು ಅಲಂಕರಿಸಿದ ಮೊದಲ ಎಂಜಿನಿಯರ್ ಆಗಿದ್ದಾರೆ. ಹಾಲಿ ಸೇನಾ ಮುಖ್ಯಸ್ಥ ನರವಾಣೆ ಅವರು ಈ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಲಿದ್ದಾರೆ.

ನರವಣೆ ಅವರು ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ದುರಂತ ಅಂತ್ಯದ ಬಳಿಕ ಅಧಿಕಾರ ವಹಿಸಿಕೊಂಡಿದ್ದರು. ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 12 ಶಸ್ತ್ರಸಜ್ಜಿತ ಸಿಬ್ಬಂದಿ ಡಿಸೆಂಬರ್ 8, 2021 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಫೆಬ್ರವರಿ 2022 ರಲ್ಲಿ ಲೆಫ್ಟಿನೆಂಟ್ ಜನರಲ್ ಸಿ ಪಿ ಮೊಹಾಂತಿ ಉತ್ತರಾಧಿಕಾರಿಯಾಗಿ ಪಾಂಡೆ ಅವರು ಭಾರತೀಯ ಸೇನೆಯ ಹೊಸ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅವರು ಆ ಜವಾಬ್ದಾರಿ ವಹಿಸುವ ಮೊದಲು ಪೂರ್ವ ಸೇನಾ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನಿಯಂತ್ರಣ ರೇಖೆಯ ಉದ್ದಕ್ಕೂ ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಪಲ್ಲನ್‌ವಾಲಾ ವಲಯದಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಪಾಂಡೆ ಅವರು 117 ಇಂಜಿನಿಯರ್ ರೆಜಿಮೆಂಟ್‌ಗೆ ಕಮಾಂಡರ್ ಆಗಿದ್ದರು. ಪಾಂಡೆ ಅವರು ಕ್ಯಾಂಬರ್ಲಿ (ಯುನೈಟೆಡ್ ಕಿಂಗ್‌ಡಮ್) ನ ಸ್ಟಾಫ್ ಕಾಲೇಜಿನ ಪದವೀಧರರಾಗಿದ್ದಾರೆ ಮತ್ತು ಹೈಯರ್ ಕಮಾಂಡ್ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜ್ ಕೋರ್ಸ್‌ಗಳಿಗೆ ಹಾಜರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments