HomeNationalಮಧ್ಯಪ್ರದೇಶ: ಮೊಮ್ಮಗಳು, ಪತ್ನಿಯನ್ನು ರಕ್ಷಿಸಲು ಬರೀ ಕೈಗಳಿಂದ ಚಿರತೆಯೊಂದಿಗೆ ಹೋರಾಡಿದ ವ್ಯಕ್ತಿ

ಮಧ್ಯಪ್ರದೇಶ: ಮೊಮ್ಮಗಳು, ಪತ್ನಿಯನ್ನು ರಕ್ಷಿಸಲು ಬರೀ ಕೈಗಳಿಂದ ಚಿರತೆಯೊಂದಿಗೆ ಹೋರಾಡಿದ ವ್ಯಕ್ತಿ

ಧಾರ್: ಶನಿವಾರ ಬೆಳಗ್ಗೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಲ್ಚಾ ಬ್ಲಾಕ್‌ನಲ್ಲಿ ಚಿರತೆ ದಾಳಿಗೆ ಅಪ್ರಾಪ್ತ ಬಾಲಕಿ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದ್ದು ಚಿರತೆಯೊಂದಿಗೆ ಬರೀ ಕೈಯಲ್ಲಿ ಹೋರಾಡಿದ ವ್ಯಕ್ತಿಯಿಂದಾಗಿ ಈ ಘಟನೆ ದೇಶದಾದ್ಯಂತ ಸುದ್ದಿಯಾಗಿದೆ.

ಘಟನೆಯು ಹೆದ್ರಿ ಗ್ರಾಮದಲ್ಲಿ ಬೆಳಿಗ್ಗೆ 7 ಗಂಟೆಗೆ ವರದಿಯಾಗಿದೆ. 56 ವರ್ಷದ ಛಗನ್ ತನ್ನ ಹೆಂಡತಿ ಮತ್ತು ಮೊಮ್ಮಗಳು 9 ವರ್ಷದ ಮನೀಶಾ ಅವರೊಂದಿಗೆ ತಮ್ಮ ಗುಡಿಸಲಿನ ಹೊರಗೆ ಮಲಗಿದ್ದರು. ಅವರು ಗಮನಿಸುವ ಮೊದಲೇ ಚಿರತೆಯೊಂದು ಅವರ ಮೇಲೆ ದಾಳಿ ಮಾಡಿತು ಮತ್ತು ಛಗನ್ ಮತ್ತು ಅವನ ಅಪ್ರಾಪ್ತ ಮೊಮ್ಮಗಳನ್ನು ಗಾಯಗೊಳಿಸಿತು. ಮುಖಕ್ಕೆ ಪೆಟ್ಟು ಬಿದ್ದ ಛಗನ್ ಹಾಗು ಆತನ ಅಪ್ರಾಪ್ತ ಮೊಮ್ಮಗಳನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಇಬ್ಬರಿಗೂ ಗಂಭೀರ ಗಾಯಗಳಾಗಿಲ್ಲ.

ಪೊದೆಗಳಲ್ಲಿ ಅಡಗಿದ್ದ ಚಿರತೆ ಮೊದಲು ತನ್ನ ಮೇಲೆ ದಾಳಿ ಮಾಡಿತು ಎಂದು ಛಗನ್ ಅವರ ಪತ್ನಿ ಮಾಹಿತಿ ನೀಡಿದರು. ಆಗ ಛಗನ್ ನೋಡಿ ಎಚ್ಚರಿಸಿದರು. ಮಹಿಳೆಯ ಮೇಲೆ ದಾಳಿ ಮಾಡಲು ವಿಫಲವಾದ ಚಿರತೆ ಛಗನ್ ಮತ್ತು ಹುಡುಗಿಯ ಮೇಲೆ ದಾಳಿ ಮಾಡಿದೆ. ಸುಮಾರು ಮೂರು ನಿಮಿಷಗಳ ಕಾಲ ಛಗನ್ ಬರಿ ಕೈಯಲ್ಲಿ ಚಿರತೆಯೊಂದಿಗೆ ಹೋರಾಡಿದರು. ಕಾದಾಟದಲ್ಲಿ ಛಗನ್ ಮುಖ ಹಾಗೂ ಎದೆಯ ಭಾಗದಲ್ಲಿ ಗಾಯದ ಗುರುತುಗಳು ಬಿದ್ದಿವೆ ಎಂದು ಛಗನ್ ಪತ್ನಿ ತಿಳಿಸಿದರು.

ಚಿರತೆ ದಾಳಿ ಮಾಡಿದ ತಕ್ಷಣ ನಮಗೆ ಏನೂ ಅರ್ಥವಾಗಲಿಲ್ಲ. ಚಿರತೆಯ ಹಿಡಿತದಿಂದ ಬಾಲಕಿಯನ್ನು ಬಿಡಿಸಲು ಇಬ್ಬರೂ ಹರಸಾಹಸ ಪಟ್ಟರು. ಚಿರತೆ ಬಾಲಕಿಯನ್ನು ಬಿಟ್ಟ ಬಳಿಕ ಸ್ಥಳೀಯರ ಬೊಬ್ಬೆಯಿಂದ ಚಿರತೆ ಮನೆಯೊಳಗೆ ಓಡಿ ಹೋಯಿತು. ನಾವು ತಕ್ಷಣ ಮನೆಯ ಬಾಗಿಲಿಗೆ ಬೀಗ ಹಾಕಿದೆವು ಎಂದು ಛಗನ್ ಪತ್ನಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments