
ಶೋಪಿಯಾನ್: ಜಮ್ಮು ಮತ್ತು ಕಾಶ್ಮೀರದ ಹಿಂದೂಗಳ ಮೇಲಿನ ಧಾಳಿ ಮುಂದುವರೆದಿದ್ದು ಹಿಂದೂ ರಾಜ್ಯವನ್ನು ಹಂತ ಹಂತವಾಗಿ ಮುಸ್ಲಿಂ ರಾಜ್ಯವನ್ನಾಗಿ ಮಾಡಿದ ಮೇಲೂ ಮುಸ್ಲಿಂ ಮತಾಂಧರ ಆಕ್ರಮಣಗಳು ನಿಲ್ಲುತ್ತಿಲ್ಲ. ಇಲ್ಲಿನ ಅಂಗಡಿಯಲ್ಲಿ ವ್ಯಾಪಾರಿಯಾಗಿದ್ದ ಕಾಶ್ಮೀರಿ ಪಂಡಿತನ ಮೇಲೆ ಇಸ್ಲಾಂ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.
ಶೋಪಿಯಾನ್ ಜಿಲ್ಲೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಚೊಟಿಗಮ್ ಗ್ರಾಮದ ಬಾಲ್ ಕೃಷ್ಣ ಅವರ ಕಾಲು, ಕೈಗಳಿಗೆ ಗಂಭೀರವಾದ ಗಾಯಗಳಾಗಿವೆ. ತಕ್ಷಣವೇ ಅವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲ್ ಕೃಷ್ಣ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸೇನಾ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದ್ದಾರೆ.
ಸೋಮವಾರ (ಏಪ್ರಿಲ್ 4) ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಒಂದರ ಹಿಂದೆ ಒಂದರಂತೆ ಮೂರು ದಾಳಿ ನಡೆಸಿದ್ದಾರೆ. ಕಾಶ್ಮೀರಿ ಪಂಡಿತ್ ಅಂಗಡಿ ಮೇಲೆ ಗುಂಡಿನ ದಾಳಿಗೂ ಮೊದಲು, ಮೈಸುಮಾ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧ ಹುತಾತ್ಮರಾಗಿದ್ದು, ಮತ್ತೊಬ್ಬ ಯೋಧ ಗಾಯಗೊಂಡಿದ್ದರು. ಅದಕ್ಕೂ ಮೊದಲು ಪುಲ್ವಾಮಾದ ಲಾಜುರಾದಲ್ಲಿ ಭಯೋತ್ಪಾದಕರು ಬಿಹಾರ ಮೂಲದ ಕಾರ್ಮಿಕರಾದ ಪಟ್ಲೇಶ್ವರ್ ಕುಮಾರ್ ಮತ್ತು ಜಾಕೋ ಚೌಧರಿ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ (ಎಲ್ಲ ಸುದ್ದಿಗಳು ನಿಮ್ಮ ಮೊಬೈಲ್ ನಲ್ಲಿ)
https://chat.whatsapp.com/CMUDdTXoFVn7atm3zHYGrd












































