National

ಕೇದಾರನಾಥ ಕ್ಷೇತ್ರಕ್ಕೆ 130 ಕೋಟಿಗಳ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ.

ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥ ಕ್ಷೇತ್ರದ ಭೇಟಿಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮಂತ್ರಿಯವರು ಆದಿ ಶಂಕರಾಚಾರ್ಯರ ಪುತ್ಥಳಿ ಜತೆಗೆ ಕ್ಷೇತ್ರದ ಪುನರ್ ಅಭಿವೃದ್ಧಿಗೆ ಸಂಬಂಧಿಸಿದ ರೂ. 130 ಕೋಟಿಗಳ ಯೋಜನೆಗಳನ್ನು ಉದ್ಘಾಟನೆಗೊಳಿಸಿದರು.

130 ಕೋಟಿಯ ಯೋಜನೆಗಳಲ್ಲಿ ಸರಸ್ವತಿ ರಿಟೈನಿಂಗ್ ವಾಲ್ ಆಸ್ಥಾಪಥ್ ಮತ್ತು ಘಾಟ್‌ಗಳು, ಮಂದಾಕಿನಿ ರಿಟೈನಿಂಗ್ ವಾಲ್ ಆಸ್ಥಾಪತ್, ಅರ್ಚಕರ ಮನೆ, ಮಂದಾಕಿನಿ ನದಿಯ ಗರುಡ್ಚಟ್ಟಿ ಸೇತುವೆ ಹಾಗು ಇತರ ಮೂಲಸೌಕರ್ಯ ಕೆಲಸಗಳು ಸೇರಿವೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, 2013ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ನಂತರ, ಕೇದಾರನಾಥವನ್ನು ಪುನರಾಭಿವೃದ್ಧಿ ಮಾಡಬಹುದೇ, ಮಾಡಲು ಸಾಧ್ಯವೇ ಎಂದು ಜನರು ಯೋಚಿಸುತ್ತಿದ್ದರು. ಆದರೆ ಕೇದಾರನಾಥ ಮತ್ತೆ ಅಭಿವೃದ್ಧಿಯಾಗಲಿದೆ ಎಂದು ನನ್ನ ಅಂತರಾತ್ಮ ಹೇಳುತ್ತಿತ್ತು. ಕೇದಾರನಾಥದಲ್ಲಿ ಮರು ನಿರ್ಮಾಣದ ಕಾರ್ಯ ಸಾಧ್ಯವಾಗಿದ್ದು ಈಶ್ವರನ ಕೃಪೆಯಿಂದ. ನಮಗೆ ಆಗುವ ಕೆಲವು ದೈವಿಕ ಅನುಭವಗಳನ್ನು ವ್ಯಕ್ತಪಡಿಸಲು ಆಗುವುದಿಲ್ಲ. ನಿನ್ನೆ ತಾನೇ ನಮ್ಮ ಹೆಮ್ಮೆಯ ಸೈನಿಕರ ಜತೆ ದೀಪಾವಳಿ ಆಚರಿಸಿ ಬಂದಿದ್ದೇನೆ. ಇಂದು ಬಲಿಪಾಡ್ಯಮಿಯಂದು ಕೇದಾರನಾಥದಲ್ಲಿ ಪೂಜೆ ಮಾಡಿದ್ದೇನೆ ಎಂದು ಹೇಳಿದರು.

ಉತ್ತರಾಖಂಡ್‌ ರಾಜ್ಯದ ಚಾರ್ ಧಾಮ್‌ಗಳಿಗೆ ರೋಪ್ ವೇ ಮಾಡಲಾಗುವುದು. ರೋಪ್‌ವೇಗೆ ರಸ್ತೆ ಸಂಪರ್ಕವನ್ನು ಒಳಗೊಂಡಂತೆ ಮೂಲಸೌಕರ್ಯ ಕಾರ್ಯಗಳನ್ನು ಮಾಡಲು ಯೋಜಿಸಲಾಗಿದೆ. ಈ ೧೦ ವರ್ಷ ಉತ್ತರಾಖಂಡಕ್ಕೆ ಮೀಸಲು. ಮುಂದಿನ 10 ವರ್ಷಗಳಲ್ಲಿ ರಾಜ್ಯ ಹೆಚ್ಚು ಅಭಿವೃದ್ಧಿ ಆಗಲಿದೆ ಎಂದು ಪ್ರಧಾನಿ ಹೇಳಿದರು.

Exit mobile version