HomeNationalತಮಿಳುನಾಡಿನ ಮೂರು ಸ್ಥಳಗಳಲ್ಲಿ ಎನ್‌ಐಎಯಿಂದ ದಾಳಿ: ಸ್ಥಳೀಯ ಮುಸ್ಲಿಮರಿಂದ ಅಡ್ಡಿ

ತಮಿಳುನಾಡಿನ ಮೂರು ಸ್ಥಳಗಳಲ್ಲಿ ಎನ್‌ಐಎಯಿಂದ ದಾಳಿ: ಸ್ಥಳೀಯ ಮುಸ್ಲಿಮರಿಂದ ಅಡ್ಡಿ

ತಂಜಾವೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಇಂದು (ಶನಿವಾರ) ಬೆಳಗ್ಗೆ 6 ಗಂಟೆ ಸುಮಾರಿಗೆ ತಮಿಳುನಾಡಿನ ತಂಜಾವೂರು ನಗರದ ಮೂರು ಸ್ಥಳಗಳಲ್ಲಿ ದಾಳಿ ನಡೆಸಿದೆ.

ವರ್ಷಗಳ ಹಿಂದೆ ದೇಶದ್ರೋಹ ಚಟುವಟಿಕೆಗಳ ಆರೋಪದಲ್ಲಿ ಬಂಧಿತನಾದ ದ್ವಿಚಕ್ರ ವಾಹನ ಮೆಕ್ಯಾನಿಕ್ ಅಬ್ದುಲ್ ಖಾದರ್ ಮತ್ತು ಅಹ್ಮದ್ ಅವರ ನಿವಾಸಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಜತೆಗೆ ನಾಲ್ಕು ತಿಂಗಳ ಬಂಧಿತನಾದ ಮನ್ನೈ ಬಾಬಾ ಎಂಬ ಇನ್ನೊಬ್ಬ ವ್ಯಕ್ತಿಯ ಮನೆಯಲ್ಲೂ ಶೋಧ ನಡೆಸಲಾಗಿದೆ.

ಶೋಧ ವೇಳೆ ಮುಸ್ಲಿಂ ಜನರ ಗುಂಪು ಭಾರೀ ಸಂಖ್ಯೆಯಲ್ಲಿ ಅಬ್ದುಲ್ ಖದರ್ ಹಾಗು ಅಹಮದ್ ಅವರ ಮನೆ ಮುಂದೆ ಸೇರಿ ಎನ್ಐಎ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಇದರಿಂದ ಸುಮಾರು ಐದು ಗಂಟೆಗಳ ಕಾಲ ಶೋಧ ಕಾರ್ಯಕ್ಕೆ ಅಡ್ಡಿಯಾಯಿತು. ಸ್ಥಳೀಯ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಪ್ಪಿಸಿದರು.

NIA ತಂಡ ಬಂಧಿತರ ಆಧಾರ್ ಕಾರ್ಡ್‌ಗಳ ವಿವರ, ಅವರ ಫೋನ್‌ಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಅದರಲ್ಲಿನ ಮೆಸೇಜುಗಳನ್ನು ಪರಿಶೀಲಿಸಿತು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments