
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಧಾಳಿ ಮತ್ತಷ್ಟು ಹೆಚ್ಚುತ್ತಿದ್ದು ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದೂ ದೇವಾಲಯವೊಂದನ್ನು ದರೋಡೆಗೈಯಲಾಗಿದೆ. ದೇಗುಲಕ್ಕೆ ನುಗ್ಗಿರುವ ಮುಸ್ಲಿಂ ಮತಾಂಧರು ದೇವರ ಚಿನ್ನಾಭರಣ ಹಾಗು ಹುಂಡಿಯಲ್ಲಿದ್ದ ನಗದನ್ನು ದೋಚಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೋಟ್ರಿ ನಗರದಲ್ಲಿ ದೇವಿ ಮಾ ದೇಗುಲದಲ್ಲಿ ಈ ಘಟನೆ ಜರಗಿದೆ. ಹಿಂದೂಗಳ ದೊಡ್ಡ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಈ ದುರ್ಘಟನೆ ಜರಗಿದೆ. ದೇಗುಲದ ಬೀಗ ಮುರಿದು ಒಳ ನುಗ್ಗಿದ ಕಳ್ಳರು 10 ತೊಲ ಬೆಳ್ಳಿ ಆಭರಣ ಹಾಗು ಹುಂಡಿಯಲ್ಲಿದ್ದ 25,000 ರೂಪಾಯಿ ಹಣವನ್ನು ದೋಚಿದ್ದಾರೆ.
ಪಾಕಿಸ್ತಾನದಲ್ಲಿ ಹಿಂದೂ ದೇಗುಲಗಳ ಮೇಲಿನ ಧಾಳಿ ಹೆಚ್ಚುತ್ತಿದ್ದು ಎರಡು ತಿಂಗಳ ಹಿಂದೆ ಸಿಂಧ್ ಪ್ರಾಂತ್ಯದಲ್ಲಿ ಶ್ರೀ ಕೃಷ್ಣನ ದೇವಾಲಯದ ಮೇಲೆ ಬಹುಸಂಖ್ಯಾತ ಮುಸ್ಲಿಮರು ಧಾಳಿ ನಡೆಸಿ ವಿಗ್ರಹಗಳನ್ನು ಧ್ವಂಸಗೊಳಿಸಿದ್ದರು. ಜತೆಗೆ ದೇಗುಲದ ಪೀಠೋಪಕರಣ ಹಾಗು ಕಟ್ಟಡದ ಗೋಡೆಗಳನ್ನು ಹಾನಿಗೊಳಿಸಿದ್ದರು.