HomeNationalರಾಜಸ್ಥಾನ ಪಂಚಾಯತ್ ಚುನಾವಣೆ: ಕಾಂಗ್ರೆಸ್ 670, ಬಿಜೆಪಿ 551

ರಾಜಸ್ಥಾನ ಪಂಚಾಯತ್ ಚುನಾವಣೆ: ಕಾಂಗ್ರೆಸ್ 670, ಬಿಜೆಪಿ 551

ಜೈಪುರ: ರಾಜಸ್ಥಾನದ 6 ಜಿಲ್ಲೆಗಳ ಪಂಚಾಯತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಂಗ್ರೆಸ್ 670 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ 551 ಸ್ಥಾನಗಳನ್ನು ಗೆದ್ದಿದೆ. ಉಳಿದಂತೆ ಪಕ್ಷೇತರರು 290, ಬಿಎಸ್ಪಿ 11 ಹಾಗು ಆರ್.ಎಲ್.ಪಿ 40 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ.

ಜತೆಗೆ ಆರು ಜಿಲ್ಲಾ ಪಂಚಾಯಿತಿಗಳಲ್ಲಿ ನಾಲ್ಕು ಕಾಂಗ್ರೆಸ್ ಪಾಲಾಗಿದ್ದರೆ, ಒಂದರಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದೆ. ಇನ್ನೊಂದು ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಬಹುಮತಕ್ಕೆ ಕೊರತೆಯಿದೆ.

ಜೈಪುರ್, ಜೋಧ್ ಪುರ್, ಸವಾಯಿ ಮಾಧೋಪುರ್, ದೌಸಾ ಜಿಲ್ಲಾ ಪರಿಷತ್ ಕಾಂಗ್ರೆಸ್ ಪಾಲಾಗಿದ್ದು, ಸಿರೋಹಿ ಜಿಲ್ಲಾ ಪರಿಷತ್ ಮಾತ್ರ ಬಿಜೆಪಿಗೆ ದಕ್ಕಿರುವ ಏಕಮಾತ್ರ ಗದ್ದುಗೆ. ಭರತ್ ಪುರ ಜಿಲ್ಲಾ ಪರಿಷತ್’ನಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು ಅಧಿಕಾರಕ್ಕಾಗಿ ಪಕ್ಷೇತರರು ಹಾಗು ಬಿಎಸ್ಪಿ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ಇಲ್ಲಿ ಬಿಜೆಪಿ 17 ಸ್ಥಾನ ಗಳಿಸಿದ್ದು ಕಾಂಗ್ರೆಸ್ 14 ಸ್ಥಾನ ಪಡೆದಿದೆ. 4 ಸ್ವತಂತ್ರರು ಹಾಗು ಇಬ್ಬರು ಬಿಎಸ್ಪಿ ಸದಸ್ಯರು ಇದ್ದಾರೆ.

ಆರು ಜಿಲ್ಲೆಗಳ 200 ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ ಕಾಂಗ್ರೆಸ್ 99, ಬಿಜೆಪಿ 90, ಬಿಎಸ್ಪಿ 3 ಹಾಗು 8 ಮಂದಿ ಪಕ್ಷೇತರರು ಗೆದ್ದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments