HomeNationalಮದರಸಾಗಳಲ್ಲಿ ಮಕ್ಕಳಿಗೆ 'ಧರ್ಮನಿಂದನೆಗೆ ಶಿರಚ್ಛೇದನದ ಶಿಕ್ಷೆ' ನೀಡುವ ಬಗ್ಗೆ ಕಲಿಸಲಾಗುತ್ತದೆ: ಕೇರಳ ರಾಜ್ಯಪಾಲ ಆರಿಫ್ ಸ್ಪೋಟಕ...

ಮದರಸಾಗಳಲ್ಲಿ ಮಕ್ಕಳಿಗೆ ‘ಧರ್ಮನಿಂದನೆಗೆ ಶಿರಚ್ಛೇದನದ ಶಿಕ್ಷೆ’ ನೀಡುವ ಬಗ್ಗೆ ಕಲಿಸಲಾಗುತ್ತದೆ: ಕೇರಳ ರಾಜ್ಯಪಾಲ ಆರಿಫ್ ಸ್ಪೋಟಕ ಹೇಳಿಕೆ

ಉದಯ್‌ಪುರ: ದೇಶದಾದ್ಯಂತ ಸಂಚಲನ ಸೃಷ್ಟಿಸಿದ ಉದಯಪುರದ ಐಸಿಸ್ ಮಾದರಿ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪ್ರತಿಕ್ರಿಯಿಸಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ‘ಮದರಸಾಗಳಲ್ಲಿ ಧರ್ಮನಿಂದನೆಗೆ ಶಿರಚ್ಛೇದನ ಶಿಕ್ಷೆ ಎಂದು ಮಕ್ಕಳಿಗೆ ಕಲಿಸಲಾಗುತ್ತಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಮದರಸಾಗಳಲ್ಲಿನ ಕಲಿಕೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬುಧವಾರ ಉದಯ್‌ಪುರ ಶಿರಚ್ಛೇದದ ಬಗ್ಗೆ ಪ್ರತಿಕ್ರಿಯಿಸಿ, “ರೋಗಲಕ್ಷಣಗಳು ಬಂದಾಗ ನಾವು ಚಿಂತಿಸುತ್ತೇವೆ ಆದರೆ ರೋಗದ ಮೂಲವನ್ನು ಗಮನಿಸಲು ನಿರಾಕರಿಸುತ್ತೇವೆ. ಮದರಸಾಗಳಲ್ಲಿ ಮಕ್ಕಳಿಗೆ ಧರ್ಮನಿಂದೆಯ ಶಿಕ್ಷೆಯಾಗಿ ಶಿರಚ್ಛೇದ ಮಾಡುವುದು ಎಂದು ಕಲಿಸಲಾಗುತ್ತದೆ. ಇದನ್ನು ಅಲ್ಲಾಹನ ನಿಯಮವೆಂದು ಬೋಧಿಸಲಾಗುತ್ತಿದೆ ಮತ್ತು ಈ ಬೋಧನೆಗಳನ್ನು ಪರಿಶೀಲಿಸುವ ಅಗತ್ಯವಿದೆ” ಎಂದು ಹೇಳಿದರು.

ಉದಯಪುರದಲ್ಲಿ ಮಂಗಳವಾರ ಹಾಡು ಹಗಲೇ ಹಿಂದೂ ಟೈಲರ್ ಕನ್ಹಯ್ಯಾ ಲಾಲ್ ಎಂಬವರನ್ನು ಕತ್ತು ಬೇರ್ಪಡಿಸಿ ಕೊಲೆ ಮಾಡಲಾಗಿದ್ದು, ನಗರದಲ್ಲಿ ಉದ್ವಿಗ್ನತೆ ಉಂಟಾಗಿದೆ. ಕೊಲೆ ಮಾಡಿದ ಬಳಿಕ ಇಬ್ಬರು ಮುಸ್ಲಿಂ ಮತಾಂಧ ಆರೋಪಿಗಳು ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಸಂಬಂಧ ವ್ಯಕ್ತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡು ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments