National

ಕುರಾನ್ ದಹನ ಪ್ರದರ್ಶನದ ಬಳಿಕ ಸ್ವೀಡನ್‌ನಲ್ಲಿ ಭುಗಿಲೆದ್ದ ಗಲಭೆ: ಪೊಲೀಸ್ ರಿಂದ ಗುಂಡಿನ ಧಾಳಿ

ಸ್ವೀಡನ್: ಸ್ವೀಡನ್ ನಲ್ಲಿ ಇಸ್ಲಾಮಿಕ್ ಪವಿತ್ರ ಗ್ರಂಥ ಕುರಾನ್ ಅನ್ನು ದಹಿಸಿದ ಕಾರ್ಯಕ್ರಮದ ಬಳಿಕ ನಂತರ ಹಿಂಸಾಚಾರ ಭುಗಿಲೆದ್ದಿದ್ದು ಹಿಂಸಾಚಾರ ಹತ್ತಿಕ್ಕುವ ಸಂದರ್ಭ ಪೊಲೀಸರ ಗುಂಡಿಗೆ ಮೂವರು ಗಾಯಗೊಂಡಿದ್ದಾರೆ.

ಈಸ್ಟರ್ ವಾರಾಂತ್ಯದ ಸಂದರ್ಭ ಸ್ವೀಡನಿನ ಹಲವು ನಗರಗಳಲ್ಲಿ ನಡೆದ ಕುರಾನ್ ದಹನದ ನಂತರ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದು ಹಿಂಸಾಚಾರ ನಡೆದಿದೆ. ಜತೆಗೆ ಹಲವಾರು ವಾಹನಗಳನ್ನು ಸುಟ್ಟುಹಾಕಲಾಗಿದೆ. ಮೂರು ಮಂದಿಗೆ ಬುಲೆಟ್ ತಗುಲಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಮೂವರು ಗಾಯಗೊಂಡವರನ್ನು ಅಪರಾಧದ ಶಂಕೆಯ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಿಬಿಸಿ ವರದಿಗಳ ಪ್ರಕಾರ, ಗಲಭೆಯಿಂದ ಉಂಟಾದ ಗೊಂದಲಗಳ ನಂತರ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗುಂಡುಗಳನ್ನು ಹಾರಿಸಿದ್ದಾರೆ. ಹಿಂಸಾಚಾರ ಸಂಬಂಧ 17 ಜನರನ್ನು ಬಂಧಿಸಲಾಗಿದೆ.

ಡ್ಯಾನಿಶ್ ಬಲಪಂಥೀಯ ರಾಜಕೀಯ ಪಕ್ಷ ಹಾರ್ಡ್ ಲೈನ್‌ನ ನಾಯಕ ರಾಸ್ಮಸ್ ಪಲುಡಾನ್ ಅವರು ಆಯೋಜಿಸಿದ ಕುರಾನ್ ದಹನ ಪ್ರದರ್ಶನದ ನಂತರ ಹಿಂಸಾಚಾರವು ಪ್ರಾರಂಭವಾಯಿತು. ಈಸ್ಟರ್ ವಾರಾಂತ್ಯದಲ್ಲಿ ಸ್ವೀಡನ್‌ನಾದ್ಯಂತ ಸರಣಿ ಪ್ರದರ್ಶನಗಳಿಗೆ ಅನುಮತಿ ಪಡೆದಿದ್ದ ಪಲುಡಾನ್, ಕುರಾನ್ ದಹನಕ್ಕೆ ಹೆಸರುವಾಸಿಯಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪಲುಡಾನ್ ಭಾನುವಾರ ನಾರ್ಕೋಪಿಂಗ್‌ನಲ್ಲಿ ಮತ್ತೊಂದು ರ್ಯಾಲಿಯನ್ನು ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಇದು ಪ್ರತಿಭಟನಾಕಾರರನ್ನು ಪ್ರೇರೇಪಿಸಿತು ಎಂದು ತಿಳಿದುಬಂದಿದೆ.

Exit mobile version