National

ಜಮ್ಮುವಿನಲ್ಲಿ ಹಿಂದೂ ದೇವಾಲಯ ಧ್ವಂಸ, ಮೂರ್ತಿಗಳನ್ನು ಒಡೆದು ಹಾಕಿದ ದುಷ್ಕರ್ಮಿಗಳು: ತಡವಾಗಿ ಬೆಳಕಿಗೆ

ಜಮ್ಮು: ಅಪರಿಚಿತ ಮತಾಂಧ ದುಷ್ಕರ್ಮಿಗಳು ಜಮ್ಮುವಿನಲ್ಲಿನ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ. ದಶಕಗಳಷ್ಟು ಹಳೆಯದಾದ ದೇವಾಲಯದಲ್ಲಿ ದೇವತೆಗಳ ವಿಗ್ರಹಗಳನ್ನು ಸಂಪೂರ್ಣ ಹಾನಿಗೊಳಿಸಲಾಗಿದೆ. ಜಮ್ಮು ನಗರದ ಹೊರವಲಯದಲ್ಲಿರುವ ಸಿದ್ರಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಶನಿವಾರ ಬೆಳಗ್ಗೆ ಜಮ್ಮು ನಗರದ ಹೊರವಲಯದಲ್ಲಿರುವ ಸಿದ್ರಾ ಪ್ರದೇಶದ ದೇವಸ್ಥಾನದಲ್ಲಿ ಧ್ವಂಸ ಘಟನೆ ನಡೆದಿದ್ದು, ಘಟನೆ ಬಳಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶನಿವಾರ ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಅರ್ಚಕ ದೇಗುಲ ಹಾಗು ಮೂರ್ತಿಗಳು ಒಡೆದು ಹೋಗಿರುವುದನ್ನು ಗಮನಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಕೆಲವು ಅಪರಿಚಿತ ಅಂಶಗಳು ಶುಕ್ರವಾರ ತಡರಾತ್ರಿ ಸ್ಥಳೀಯ ದೇವತೆಗಳು ಸೇರಿದಂತೆ ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿವೆ. ಕೆಲವು ವಿಗ್ರಹಗಳು ತುಂಡಾಗಿದ್ದವು. ಅವರು ದೇವಾಲಯದ ಸ್ಟೋರ್ ರೂಮ್ ಅನ್ನು ಒಡೆಯಲು ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ, ”ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಮಾಧ್ಯಮಗಳಲ್ಲಿ ಈ ವಿಚಾರ ವರದಿಯಾಗದೆ ವಿಷಯ ತಡವಾಗಿ ಹೊರ ಬಿದ್ದಿದೆ.

ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ (ಎಲ್ಲ ಸುದ್ದಿಗಳು ನಿಮ್ಮ ಮೊಬೈಲ್ ನಲ್ಲಿ)
https://chat.whatsapp.com/CMUDdTXoFVn7atm3zHYGrd

Exit mobile version