HomeNationalಮುಂದಿನ ವಾರದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 20 ರೂ ತನಕ ಹೆಚ್ಚಳ ಸಾಧ್ಯತೆ.?

ಮುಂದಿನ ವಾರದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 20 ರೂ ತನಕ ಹೆಚ್ಚಳ ಸಾಧ್ಯತೆ.?

ನವದೆಹಲಿ: ರಷ್ಯಾ ಉಕ್ರೇನ್ ಮೇಲಿನ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 115 ಡಾಲರ್ ಮೀರಿದೆ. ಪರಿಣಾಮ ಕೆಲ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರಿಗೆ ಸುಮಾರು 15 ರಿಂದ 20 ರೂಪಾಯಿ ಕೆಲ ದಿನಗಳ ಅಂತರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಸುಮಾರು 6 ತಿಂಗಳಿಂದ ದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಆದರೆ ಕಚ್ಚಾ ತೈಲದ ಬೆಲೆ ಸುಮಾರು ಶೇ 70 ರಷ್ಟು ಹೆಚ್ಚಾಗಿದೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 115 ಡಾಲರ್ ದಾಟಿದೆ. ಕಳೆದ ನವೆಂಬರ್ ನಿಂದ ಕಚ್ಚಾ ತೈಲವು ಪ್ರತಿ ಬ್ಯಾರೆಲ್ ಗೆ 40 ಡಾಲರ್ ಕ್ಕಿಂತ ಹೆಚ್ಚು ತುಟ್ಟಿಯಾಗಿದೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಕಾರಣ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಹೆಚ್ಚಳ ಮಾಡಿರಲಿಲ್ಲ. ಚುನಾವಣೆ ಮುಗಿದ ತಕ್ಷಣ ಬೆಲೆ ಏರಿಕೆ ಮಾಡುವ ಎಲ್ಲ ಸಾಧ್ಯತೆ ಹಾಗು ಅನಿವಾರ್ಯತೆ ಸರಕಾರಕ್ಕಿದೆ. ಹಾಗಾಗಿ ಚುನಾವಣೆ ಮುಗಿದು ಮುಂದಿನ ವಾರದಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments