HomeNationalಉತ್ತಮ ಪೋಷಕರಾಗುವ ಬಗ್ಗೆ ಶಾರುಖ್ ಉಪನ್ಯಾಸ ಮಾಡುವ ಹಾಗಿಲ್ಲ: ಮಗನ ಡ್ರಗ್ ಕೇಸ್ ಹಿನ್ನಲೆ ಬಿಜೂಸ್...

ಉತ್ತಮ ಪೋಷಕರಾಗುವ ಬಗ್ಗೆ ಶಾರುಖ್ ಉಪನ್ಯಾಸ ಮಾಡುವ ಹಾಗಿಲ್ಲ: ಮಗನ ಡ್ರಗ್ ಕೇಸ್ ಹಿನ್ನಲೆ ಬಿಜೂಸ್ ಆಪ್ ಅನ್-ಇನ್ಸ್ಟಾಲ್ ಮಾಡಿದ ಜನರು

ಮುಂಬೈ: ಹೆಸರಾಂತ ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಡ್ರಗ್ ಕೇಸ್ ಮೇಲೆ ಬಂಧಿತನಾಗಿರುವ ಹಿನ್ನಲೆಯಲ್ಲಿ ಜನರು ಶಾರುಖ್ ಖಾನ್ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ತೀವ್ರ ಧಾಳಿ ಆರಂಭಿಸಿದ್ದಾರೆ. ಶಾರುಖ್ ಖಾನ್ ಬ್ರಾಂಡ್ ಅಂಬಾಸಡರ್ ಆಗಿರುವ ಆನ್ಲೈನ್ ಶಿಕ್ಷಣ ಆಪ್ ಬಿಜೂಸ್’ನಿಂದ ಶಾರುಖ್ ಖಾನ್ ಅನ್ನು ತೆಗೆದು ಹಾಕುವಂತೆ ಜನರು ಒತ್ತಾಯಿಸುತ್ತಿದ್ದಾರೆ.

2017ರಲ್ಲಿ ಬಿಜೂಸ್ ಸಂಸ್ಥೆ ಶಾರುಖ್ ಖಾನ್ ನೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿತ್ತು. ಆ ನಂತರ ಬಿಜೂಸ್ ತೀವ್ರಗತಿಯಲ್ಲಿ ಪ್ರಸಿದ್ಧಿ ಪಡೆದುಕೊಂಡು ಲಕ್ಷಾಂತರ ಗ್ರಾಹಕರನ್ನು ಗಳಿಸಿಕೊಂಡಿತ್ತು. ಇದೀಗ ಶಾರುಖ್ ಮಗ ಡ್ರಗ್ ಕೇಸಿನಲ್ಲಿ ಅರೆಸ್ಟ್ ಆಗಿರುವ ಕಾರಣ ಶಾರುಖ್ ಖಾನ್ ಉತ್ತಮ ಪೋಷಕರಾಗುವ ಬಗ್ಗೆ ಬಿಜೂಸ್ ಆಪ್ ನಲ್ಲಿ ಉಪನ್ಯಾಸ ನೀಡಲು ಯೋಗ್ಯರಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗು ಹಲವಾರು ಜನರು ಬಿಜೂಸ್ ಆಪ್ ಅನ್ನು ಅನ್ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಒಬ್ಬರು, ‘ಶಾರುಖ್ ಖಾನ್ ದೇಶದ ಮಕ್ಕಳಿಗೆ ಪಾಠ ಹೇಳಲು ಹೋಗಿ ತನ್ನ ಸ್ವಂತ ಮಗನನ್ನೇ ಕಡೆಗಣಿಸಿದಂತೆ ಕಾಣುತ್ತಿದೆ. ಶೀಘ್ರವೇ ಬಿಜೂಸ್ ಆತನನ್ನು ಬ್ರಾಂಡ್ ಅಂಬಾಸಡರ್ ಸ್ಥಾನದಿಂದ ತೆಗೆದು ಹಾಕಲಿ’ ಎಂದು ಬರೆದು ಕೊಂಡಿದ್ದಾರೆ.

ಶಾರುಖ್ ಮಗ ಆರ್ಯನ್ ಖಾನ್ ಅನ್ನು ಒಕ್ಟೋಬರ್ 11ರವರೆಗೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ವೇಳೆ ಆರ್ಯನ್ ಸತತವಾಗಿ ಅಳುತ್ತಾ ಕೂತಿದ್ದ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಸತತ 4 ವರ್ಷಗಳಿಂದ ಡ್ರಗ್ ಸೇವನೆ ಮಾಡುತ್ತಿದ್ದೆ ಎಂದು ಆರ್ಯನ್ ಹೇಳಿಕೊಂಡಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments